ಇಂಗ್ಲೆಂಡಿನ ರಾಣಿ ಎರಡನೇ ಎಲಿಜಬೆತ್ ಅವರು ಸ್ಕಾಟ್ಲೆಂಡ್‌ನ ಬಾಲ್ಮೋರಲ್ ಮಹಲಿನಲ್ಲಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ಬಕಿಂಗ್‌ಹ್ಯಾಮ್ ಅರಮನೆ ತಿಳಿಸಿದೆ.
ಆಕೆಯ ವೈದ್ಯರು ಆಕೆಯ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದಾರೆ, ಆದರೆ 96 ವರ್ಷ ವಯಸ್ಸಿನ ಸಾಮ್ರಾಜ್ಞಿ ಸಧ್ಯಕ್ಕೆ ಆರಾಮಾಗಿದ್ದಾರೆ ಎಂದೂ ವೈದ್ಯರು ಹೇಳಿದ್ದಾರೆ.
ರಾಣಿಯ ಎಲ್ಲಾ ನಾಲ್ಕು ಮಕ್ಕಳು ಮತ್ತು ಪ್ರಿನ್ಸ್ ವಿಲಿಯಮ್ ಈಗ ರಾಣಿಯೊಂದಿಗೆ ಇರಲು ಸ್ಕಾಟ್ಲೆಂಡ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಪ್ರಿನ್ಸ್ ವಿಲಿಯಮ್ ಅವರ ತಮ್ಮ ಪ್ರಿನ್ಸ್ ಹ್ಯಾರಿ ಅಲ್ಲಿಗೆ ಈಗ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ.
ರಾಣಿಯ ಅಭಿಮಾನಿಗಳು ಮತ್ತು ಹಿತೈಷಿಗಳು ಬಾಲ್ಮೋರಲ್‌ನ ದ್ವಾರಗಳಲ್ಲಿ ಮತ್ತು ಲಂಡನ್‌ನ ಬಕಿಂಗ್‌ಹ್ಯಾಮ್ ಅರಮನೆಯ ಹೊರಗೆ ಜಮಾಯಿಸುತ್ತಿದ್ದರೆ ಎಂದು ವರದಿಯಾಗಿದೆ.
ಬ್ರಿಟನ್ನಿನ ಹೊಸ ಪ್ರಧಾನಿ ಲಿಜ್ ಟ್ರಸ್ ಅವರು “ಇಡೀ ದೇಶವು ಈ ಸುದ್ದಿಯ ಬಗ್ಗೆ ಆಳವಾಗಿ ಚಿಂತಿತವಾಗಿದೆ” ಎಂದು ಹೇಳಿದ್ದಾರೆ.
ಚರ್ಚ್ ಆಫ್ ಇಂಗ್ಲೆಂಡಿನ ಆರ್ಚ್ ಬಿಷಪ್ ಅವರು ಪ್ರಾರ್ಥನೆಯನ್ನು ಸಲ್ಲಿಸಿ ರಾಣಿಯವರ ಆರೋಗ್ಯಕ್ಕಾಗಿ ಬೇಡಿಕೊಳ್ಳುತ್ತಿದ್ದಾರೆ ಎಂದೂ ತಿಳಿಸಲ್ಪಟ್ಟಿದೆ. ಸ್ಕಾಟ್ಲೆಂಡ್ ಮತ್ತು ವೇಲ್ಸ್ ನ ಪ್ರಥಮರು ಕೂಡ ರಾಣಿಯವರು ತಮ್ಮ ಪ್ರಾರ್ಥನೆಗಳಿಗೆ ಪಾತ್ರರಾಗಿದ್ದಾರೆ ಎಂದು ಹೇಳಿದ್ದಾರೆ.
ಈ ಸುದ್ದಿಗಳನ್ನು ಗಮನಿಸಿದರೆ ರಾಣಿಯವರ ಆರೋಗ್ಯ ಗಂಭೀರವಾಗಿದೆ ಮತ್ತು ಇದು ಒಂದು ಪ್ರಮುಖ ಘಟ್ಟವಾಗಿರಬಹುದು ಎಂದು ತಿಳಿದುಬರುತ್ತದೆ.