ಬೆಂಗಳೂರು,ಮಾ.19 – ರಾಜ್ಯ ಬಿಜೆಪಿಯಲ್ಲಿನ ವಿದ್ಯಮಾನಗಳು ದಿನಕ್ಕೊಂದು ತಿರುವು ಪಡೆಯುತ್ತಿದ್ದು,ವರಿಷ್ಠರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ ವಸತಿ ಸಚಿವ ಸೋಮಣ್ಣ ಅವರ ಅಸಮಾಧಾನವನ್ನು ಶಮನ ಮಾಡಿದ ಬೆನ್ನಲ್ಲೇ ಬೆಳಗಾವಿ ಬಿಕ್ಕಟ್ಟು ವರಿಷ್ಠರ ಅಂಗಳ ತಲುಪಿದೆ.
ಮುಂಬರುವ ಚುನಾವಣೆ ಯಲ್ಲಿ ತಮ್ಮ ಆಪ್ತರಾದ ಮಹೇಶ್ ಕುಮಟಳ್ಳಿ,ಶ್ರೀಮಂತ ಪಾಟೀಲ್ ಅವರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿರುವ ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಬೆಳಗಾವಿ ಜಿಲ್ಲೆ ಚುನಾವಣೆಯ ಸಂಪೂರ್ಣ ಉಸ್ತುವಾರಿ ತಮಗೆ ನೀಡುವಂತೆ ಆಗ್ರಹಿಸಿದ್ದಾರೆ.
ಆದರೆ,ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಸಚಿವ ಲಕ್ಷ್ಮಣ ಸವದಿ,ಶಾಸಕ ಅಭಯ್ ಪಾಟೀಲ್ ಸೇರಿದಂತೆ ಹಲವರು ರಮೇಶ್ ಜಾರಕಿಹೊಳಿ ಅವರಿಗೆ ನಾಯಕತ್ವ ನೀಡಲು ವಿರೋಧ ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲ ಪಕ್ಷದಲ್ಲಿ ಅವರಿಗೆ ವಿಶೇಷ ಆದ್ಯತೆ ನೀಡದಂತೆ ರಾಜ್ಯ ನಾಯಕರ ಮೇಲೆ ಒತ್ತಡ ಹೇರಿದ್ದಾರೆ.
ಅಷ್ಟೇ ಅಲ್ಲ ರಮೇಶ್ ಜಾರಕಿಹೊಳಿ ನಿರ್ದಿಷ್ಟ ಉದ್ದೇಶದ ರಾಜಕಾರಣ ಮಾಡುತ್ತಿದ್ದಾರೆ.ಇದರಿಂದ ಜಿಲ್ಲೆಯಲ್ಲಿ ಬಿಜೆಪಿಗೆ ಲಾಭವಾಗುವ ಬದಲು ನಷ್ಟವೇ ಹೆಚ್ಚು. ಅನಗತ್ಯವಾಗಿ ಇತರ ಕ್ಷೇತ್ರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಹೀಗಾಗಿ ಇವರನ್ನು ಗೋಕಾಕ್ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸುವಂತೆ ವರಿಷ್ಠರಿಗೆ ಮನವಿ ಸಲ್ಲಿಸಿದ್ದಾರೆ.
ಇದಷ್ಟೇ ಅಲ್ಲ,ಇತ್ತೀಚೆಗೆ ರಾಜ್ಯ ಬಿಜೆಪಿ ಚುನಾವಣೆ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಬೆಳಗಾವಿಯ ಎಲ್ಲಾ ಬಿಜೆಪಿ ಶಾಸಕರು ಮತ್ತು ಸಂಸದರ ಸಭೆ ನಡೆಸಿದ್ದರು.ಇದರಲ್ಲಿ ಬಹುತೇಕರು ರಮೇಶ್ ಜಾರಕಿಹೊಳಿ ವಿರುದ್ದ ದೂರುಗಳ ಸರಮಾಲೆಯನ್ನೇ ನೀಡಿದ್ದರು.
ಅದರಲ್ಲೂ ಸಂಸದ ಈರಣ್ಣ ಕಡಾಡಿ ಮತ್ತು ಲಕ್ಷ್ಮಣ ಸವದಿ ಅವರು ಜಾರಕಿಹೊಳಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವುದು ಸೂಕ್ತ ಇದರಿಂದ ಬೆಳಗಾವಿ ಬಿಜೆಪಿಗೆ ಲಾಭವಾಗಲಿದೆ ಇಲ್ಲವಾದರೆ ಪಕ್ಷಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರೆನ್ನಲಾಗಿದೆ.
ಇದಾದ ನಂತರ ಪ್ರಧಾನ್ ಪ್ರತ್ಯೇಕವಾಗಿ ಜಾರಕಿಹೊಳಿ ಅವರ ಜೊತೆ ಮಾತುಕತೆ ನಡೆಸಿ, ಸಮಗ್ರ ವರದಿಯೊಂದನ್ನು ಸಲ್ಲಿಸಿದ್ದಾರೆ. ಇದರಲ್ಲಿ ಅವರು ಜಾರಕಿಹೊಳಿ ಅವರನ್ನು ಕಟ್ಟಿ ಹಾಕುವ ಇಲ್ಲವೇ ಪಕ್ಷದಿಂದ ಹೊರ ಹಾಕುವ ನಿರ್ಧಾರ ಕೈಗೊಳ್ಳುವುದು ಸೂಕ್ತ ಯಾವುದೇ ಕಾರಣಕ್ಕೂ ಅವರ ಬೇಡಿಕೆ ಹಾಗೂ ಒತ್ತಡ ತಂತ್ರಕ್ಕೆ ಮಣಿಯಬಾರದು ಎಂದು ವರದಿಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ
ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ದಿಡೀರ್ ದೆಹಲಿಗೆ ದೌಡಾಯಿಸಿ, ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ಈ ಬೆಳವಣಿಗೆ ಹಲವರ ಹುಬ್ಬೇರುವಂತೆ ಮಾಡಿದೆ.
ಅಮಿತ್ ಶಾ ಭೇಟಿ ಬಳಿಕ ಪ್ರತಿಕ್ರಿಯೆ ನೀಡಿದ ರಮೇಶ್ ಜಾರಕಿಹೊಳಿ,ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದೇನೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಲ್ಲಿನ ಬೆಳವಣಿಗೆಗಳ ಬಗ್ಗೆ ಶಾ ಅವರೊಂದಿಗೆ ಮಾಹಿತಿ ಹಂಚಿಕೊಂಡಿದ್ದೇನೆ ಇಲ್ಲಿ ಬಿಜೆಪಿ ಮೇಲುಗೈ ಸಾಧಿಸಲು ಅನುಸರಿಸಬಹುದಾದ ರಾಜಕೀಯ ತಂತ್ರಗಳ ಬಗ್ಗೆಯೂ ಚರ್ಚೆ ನಡೆಸಿದೆ. ಆದರೆ, ಸಭೆಯಲ್ಲಿ ಚರ್ಚೆಯಾದ ಕೆಲವು ಗೌಪ್ಯ ವಿಚಾರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿದರು.
Previous Articleಆರೋಗ್ಯ ನೌಕರರ ಮೇಲೆ ESMA ಬ್ರಹ್ಮಾಸ್ರ್ತ
Next Article BJP ಸಿಎಂ ಅಭ್ಯರ್ಥಿ ಯಾರು?
3 ಪ್ರತಿಕ್ರಿಯೆಗಳು
ГК Айтек http://www.multimedijnyj-integrator.ru/ .
Получите эксклюзивный промокод для наших подписчиков. Получите эксклюзивный промокод для наших подписчиков. .
частная скорая наркологическая помощь частная скорая наркологическая помощь .