ಒಡಿಶಾದಲ್ಲಿ ಸಂಭವಿಸಿದ ರೈಲು ದುರಂತಕ್ಕೆ ನಿಜವಾದ ಕಾರಣವೇನು ಎಂದು ಇನ್ನೂ ತಿಳಿದುಬಂದಿಲ್ಲ. ರೈಲುಗಳು ಡಿಕ್ಕಿಯಾಗುವುದನ್ನು ತಪ್ಪಿಸಲೆಂದೇ ಇರುವ ಕವಚ್ ತಂತ್ರಜ್ಞಾನ ಈ ಮಾರ್ಗದಲ್ಲಿ ಲಭ್ಯವಿರಲಿಲ್ಲ ಎಂದು ವರದಿಯಾಗಿದೆ. ಯಾವುದಾದರು ಒಂದು ರೈಲು ಸಿಗ್ನಲ್ ಜಂಪ್ ಮಾಡಿದರೆ ಈ ಕವಚ್ ತಂತ್ರಜ್ಞಾನ ಆ ಮಾರ್ಗದ ಎಲ್ಲರಿಗೂ ಸೂಚನೆ ನೀಡುತ್ತದೆ ಮತ್ತು ಆ ರೈಲಿನ ನಿಯಂತ್ರಣ ತನ್ನದಾಗಿಸಿಕೊಂಡು ಆ ರೈಲಿನ ಚಲನೆಯನ್ನು ಕೂಡ ಮಾರ್ಪಾಡುಮಾಡಿಬಿಡುತ್ತದೆ. ಸಿಗ್ನಲ್ ಜಂಪ್ ಮುಂತಾದ ಕಾರಣಗಳಿಂದಲೇ ರೈಲು ಅವಘಢಗಳಾಗುವುದರಿಂದ ಈ ತಂತ್ರಜ್ಞಾನ ಅನೇಕ ಸಂದರ್ಭಗಳಲ್ಲಿ ಬಹಳ ಉಪಯೋಗಕ್ಕೆ ಬಂದಿದೆ. ಕೊರಮಂಡಲ್ ಎಕ್ಸ್ಪ್ರೆಸ್ ರೈಲು ನಿಂತಿದ್ದ ಗೂಡ್ಸ್ ಗಾಡಿಗೆ ಹಿಂದಿನಿಂದ ಗುದ್ದಿದ ಪರಿಣಾಮ ಈ ಎಕ್ಸ್ಪ್ರೆಸ್ ರೈಲಿನ ಬೋಗಿಗಳು ಚೆಲ್ಲಾಪಿಲ್ಲಿಯಾಗಿ ಕೆಲವು ಬೋಗಿಗಳು ಇನ್ನೊಂದು ಟ್ರ್ಯಾಕ್ ಮೇಲೆ ಬಿದ್ದವು. ಆ ಟ್ರ್ಯಾಕ್ ನಲ್ಲಿ ಬರುತ್ತಿದ್ದ ಬೆಂಗಳೂರು ಹೌರಾ ಎಕ್ಸ್ಪ್ರೆಸ್ ಗಾಡಿ ಆ ಬಿದ್ದಿದ್ದ ಬೋಗಿಗಳಿಗೆ ಡಿಕ್ಕಿ ಹೊಡೆದು ಈ ಭೀಕರ ದುರಂತ ಸಂಭವಿಸಿದೆ. ಆದರೆ ಯಾವ ಕಾರಣದಿಂದ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ನಿಂತಿದ್ದ ಗೂಡ್ಸ್ ಗಾಡಿಗೆ ಗುದ್ದಿದೆ ಮತ್ತು ಆ ಘಟನೆಯನ್ನು ಹೇಗೆ ತಡೆಯಬಹುದಿತ್ತು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಈಗ ಎಲ್ಲಾ ಮೃತ ದೇಹಗಳನ್ನು ಹೊರತೆಗೆದು ರೈಲು ಪಟ್ಟಿಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿರುವುದರಿಂದ ಈ ಕೆಲಸ ಮುಗಿದ ಮೇಲೆ ವಿಸ್ತೃತವಾದ ತನಿಖೆ ನಡೆದು ಸರಿಯಾದ ಮಾಹಿತಿ ಹೊರಬರಲಿದೆ ಎಂದು ಹೇಳಾಲಾಗಿದೆ.
Previous Articleಹತ್ಯೆ ಪ್ರಕರಣ ಬೇಧಿಸಿದ ಕಿಂಗ್ ಕೊಹ್ಲಿ
Next Article ರಾಜ್ಯ ಸರ್ಕಾರದ ವಿರುದ್ಧ BJP ಬೀದಿ ಹೋರಾಟ