ನಾಡಧ್ವಜ, ನಾಡಗೀತೆ, ನಾಡಿನ ಸಾಧಕರ ಬಗ್ಗೆ ಅವಹೇಳನ ಮಾಡಿದ ರೋಹಿತ್ ಚಕ್ರತೀರ್ಥನನ್ನು ಬಂಧಿಸಬೇಕು ಹಾಗು ಆತನ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಶಿಫಾರಸನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿ ಮೈಸೂರು ಜಿಲ್ಲಾ ಒಕ್ಕಲಿಗರ ಸಂಘ, ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ಹಾಗು ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಮೈಸೂರು ಇವರ ಜಂಟಿ ಸಹಯೋಗದಲ್ಲಿ ಪ್ರತಿಭಟನೆ ಮಾಡುವುದರ ಜೊತೆಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ, ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಸಿ ಜಿ ಗಂಗಾಧರ್, ಟ್ರಸ್ಟ ಅಧ್ಯಕ್ಷ ಸತೀಶ್ ಗೌಡ, ತೇಜೇಶ್ ಲೋಕೇಶ್ ಗೌಡ, ಯುವ ವೇದಿಕೆ ಅಧ್ಯಕ್ಷ ರಾಜಕುಮಾರ್, ಯಮುನಾ, ಸುಶೀಲ ನಂಜಪ್ಪ, ರವಿ ಎ, ಸಂತೋಷ್, ಗಿರೀಶ್ ಗೌಡ, ನಾಗಣ್ಣ, ಆಕಾಶ್ ಇನ್ನೂ ಇತರರು ಹಾಜರಿದ್ದರು.
ರೋಹಿತ್ ಚಕ್ರತಿರ್ಥರನ್ನ ಬಂಧಿಸುವಂತೆ ಪ್ರತಿಭಟನೆ
Previous Articleಲಗೋರಿ ಚಿತ್ರದ ನಾಯಕ ಸತೀಶ್ ವಜ್ರ ಹತ್ಯೆ!
Next Article ಮೈಸೂರಿಗೆ ಮೋದಿ ಆಗಮನ ಹಿನ್ನೆಲೆ ಹೈ ಅಲರ್ಟ್..!