ಹೈದರಾಬಾದ್: ದಕ್ಷಿಣ ಭಾರತೀಯರಿಗೆ ಸಿನಿಮಾ ತಾರೆಯರೆಂದರೆ, ಅದೇನೋ ಪ್ರೀತಿ ಅಭಿಮಾನ ಹಾಗೂ ತಮ್ಮ ನೆಚ್ಚಿನ ನಟರ ಬಗ್ಗೆ ಆರಾಧನೆಯ ಭಾವ. ಅದರಲ್ಲೂ ಆಂಧ್ರ ಮತ್ತು ತಮಿಳುನಾಡಿನಲ್ಲಿ ಇದು ಇನ್ನೂ ಒಂದು ಕೈ ಮೇಲು.ಅತಿ ಹೆಚ್ಚು ಭಾವನಾತ್ಮಕ ಜೀವಿಗಳಾದ ಈ ಎರಡು ರಾಜ್ಯದ ಜನತೆ, ತಮ್ಮ ನೆಚ್ಚಿನ ನಟ- ನಟಿ ಇಲ್ಲವೇ ನಾಯಕನಾಗಲಿ ಆತನಿಗಾಗಿ ಪ್ರಾಣ ಕೊಡಲು ಹಿಂದೆ ಮುಂದೆ ನೋಡುವುದಿಲ್ಲ ದೇವಾಲಯ ಕಟ್ಟಿ ಪೂಜಿಸಲು ಕೂಡ ಹಿಂಜರಿಯುವುದಿಲ್ಲ ಇದಕ್ಕೆ ನಮ್ಮ ಕಣ್ಣ ಮುಂದೆ ಹಲವಾರು ಉದಾಹರಣೆಗಳಿವೆ. (Samantha Ruth Prabhu)
ತಮ್ಮ ಅಭಿಮಾನದ ಸಿನಿಮಾ ತಾರೆಯಾರಿಗಾಗಿ ಏನು ಬೇಕಾದರೂ ಮಾಡಲು ತಯಾರಿರುವ ಇವರು ತಮ್ಮ ನೆಚ್ಚಿನ ನಟ ಇಲ್ಲ ನಟಿಯ ಸಿನಿಮಾ ಬಿಡುಗಡೆಯಾಯಿತು ಎಂದರೆ, ಮೊದಲ ಪ್ರದರ್ಶನ ವೀಕ್ಷಿಸಲು ಎಷ್ಟು ದೂರ ಬೇಕಾದರೂ ಕ್ರಮಿಸುತ್ತಾರೆ. ಇವರ ಅಭಿಮಾನದ ಹುಚ್ಚು ಹೊಳೆ ಹೇಗೆ ಬೇಕಾದರೂ ಹರಿಯುತ್ತದೆ. ಇದಕ್ಕೆ ದೊಡ್ಡ ಉದಾಹರಣೆಗಳು ಜಯಲಲಿತಾ, ಖುಷ್ಬೂ , ನಯನತಾರಾ, ನಿಧಿ ಅಗರ್ವಾಲ್, ಸೋನು ಸೂದ್ ಇವರಿಗಳಿಗಾಗಿ ದೇವಾಲಯ ಕಟ್ಟಿದ್ದೇ ಸಾಕ್ಷಿ. (Samantha Ruth Prabhu)
ಇದೀಗ ಇವರ ಸಾಲಿಗೆ ಸೇರ್ಪಡೆಯಾಗಿದ್ದಾರೆ ಸಮಂತಾ ರೂತ್ ಪ್ರಭು (Samantha Ruth Prabhu)
ತಮ್ಮ ಅನಾರೋಗ್ಯ, ಸಾಮಾಜಿಕ ಕಳಕಳಿಯ ಹಲವು ಕಾರ್ಯಕ್ರಮಗಳು, ನೋಂದವರಿಗೆ ನೆರವು, ಆಶಕ್ತರಿಗೆ ಸಾಂತ್ವನ ಇವೆ ಮೊದಲಾದ ಕಾರಣಗಳಿಗಾಗಿ ಸಾಕಷ್ಟು ಸುದ್ದಿಯಾದ ಸಮಂತಾ ಅವರಿಗಾಗಿ ಇದೀಗ ಅವರ ಅಭಿಮಾನಿ ಒಬ್ಬ ದೇವಾಲಯ ನಿರ್ಮಾಣ ಮಾಡಿದ್ದಾರೆ.
ಆಂಧ್ರಪ್ರದೇಶದ ಬಾ ಪಟ್ಲ ಜಿಲ್ಲೆಯ ಅಲಾಪಡು ಎನ್ನುವ ಗ್ರಾಮದ ತೆನಾಲಿ ಸಂದೀಪ್ ಎನ್ನುವ ಯುವಕ ಇದೀಗ ತನ್ನ ನೆಚ್ಚಿನ ನಟಿ ಸಮಂತಾ (Samantha Ruth Prabhu) ಅವರಿಗೆ ದೇವಾಲಯ ನಿರ್ಮಿಸಿದ್ದಾರೆ.
ತಮ್ಮ ತೋಟದ ಮನೆಯ ಮುಂಭಾಗದಲ್ಲಿ ದೇವಾಲಯ ಮಾದರಿಯ ಸಣ್ಣ ಕಟ್ಟಡವನ್ನು ನಿರ್ಮಿಸಿ ಅದರಲ್ಲಿ ನಗುಮುಖದ ಸಮಂತಾ ಪ್ರತಿಮೆಯನ್ನು ಅನಾವರಣ ಮಾಡಿದ್ದು ಪ್ರತಿನಿತ್ಯ ಪೂಜೆ ಮಾಡಿ ತನ್ನ ಮೆಚ್ಚಿನ ನಟಿ ಹೆಚ್ಚು ಕಾಲ ಆರೋಗ್ಯ, ಸಂತೋಷ ,ಸಮೃದ್ಧಿಯಿಂದ ಜೀವಿಸಲಿ ಎಂದು ಪ್ರಾರ್ಥಿಸುತ್ತಿದ್ದಾನೆ. (Samantha Ruth Prabhu)
ತೆನಾಲಿ ಸಂದೀಪನ ಈ ಕಾರ್ಯಕ್ಕೆ ಆತನ ಕುಟುಂಬ ಸದಸ್ಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಸಮಂತಾ ಅವರು ಅನಾರೋಗ್ಯ ಪೀಡಿತರಿಗೆ ಮಾಡುತ್ತಿರುವ ನೆರವು ತೋರಿಸುತ್ತಿರುವ ಸಾಮಾಜಿಕ ಕಳಕಳಿ ನೋಂದವರ ಬಗ್ಗೆ ಹೊಂದಿರುವ ಅನುಕಂಪ ಮೊದಲಾದ ವಿಷಯಗಳು ಸಂದೀಪನಿಗೆ ಮೆಚ್ಚುಗೆಯಾಗಿದೆ. ಹೀಗಾಗಿ ,ಆತ ಸಮಂತಾ ಅವರನ್ನು ದೇವತಾ ಭಾವದಿಂದ ಪೂಜಿಸಿ ಆರಾಧಿಸುತ್ತಿದ್ದಾನೆ ಎಂದು ಹೇಳುತ್ತಾರೆ. (Samantha Ruth Prabhu)
Also read.

2 ಪ್ರತಿಕ್ರಿಯೆಗಳು
The biggest wins are waiting at Betano. Sign up https://betanogame.org/ and claim 100% up to €500 plus 150 free spins. Enjoy lightning-fast withdrawals and the best live casino experience online. Betano – your new favorite destination for epic rewards.
The reels pause only to admire you – https://prodnisol.com , Where “maybe next time” got permanently banned .