Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ನಾಳೆಯಿಂದ ಸೀತಾಯಣ..
    ಸುದ್ದಿ

    ನಾಳೆಯಿಂದ ಸೀತಾಯಣ..

    vartha chakraBy vartha chakraಮೇ 26, 2022Updated:ಮೇ 26, 2022ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಸ್ಯಾಂಡಲ್‌ವುಡ್‌ನ‌ ಸುಪ್ರೀಂ ಹೀರೋ ಖ್ಯಾತಿಯ ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ಅಭಿನಯದ ಚೊಚ್ಚಲ ಚಿತ್ರ “ಸೀತಾಯಣ’ ಈ ವಾರ ತೆರೆಗೆ ಬರಲಿದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸೀತಾಯಣ ಚಿತ್ರ ಏಕಕಾಲಕ್ಕೆ ತೆರೆ ಕಾಣುತ್ತಿದೆ.
    ಬಿಡುಗಡೆ ಹಿನ್ನಲೆಯಲ್ಲಿ ಮಾತನಾಡಿದ ರಾಜವರ್ಧನ್‌, “ಕೇವಲ ಲವ್‌ಸ್ಟೋರಿ ಮಾತ್ರವಲ್ಲದೆ ಆ್ಯಕ್ಷನ್‌, ಸಸ್ಪೆನ್ಸ್‌-ಥ್ರಿಲ್ಲರ್‌ ಎಲ್ಲ ಎಲಿಮೆಂಟ್ಸ್‌ ಟ್ರೇಲರ್‌ನಲ್ಲಿ ಕಾಣುತ್ತಿದೆ. ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸುವಂತೆ ಟ್ರೇಲರ್‌ ಇದೆ. ಸಿನಿಮಾ ಕೂಡ ಹಾಗೆಯೇ ಥಿಯೇಟರ್‌ನಲ್ಲಿ ಪ್ರೇಕ್ಷಕರ ಮನರಂಜಿಸಿ ಗೆಲ್ಲಲಿ’ ಎಂದು ಚಿತ್ರತಂಡಕ್ಕೆ ಶುಭ ಕೋರಿದರು.
    ಚಿತ್ರದ ಟ್ರೇಲರ್‌ ಬಿಡುಗಡೆ ಬಳಿಕ ಮಾತನಾಡಿದ ನಟ ಅಕ್ಷಿತ್‌ ಶಶಿಕುಮಾರ್‌, ಇದರಲ್ಲಿ ನನ್ನದು ಮಧ್ಯಮ ವರ್ಗದ ಹುಡುಗನ ಪಾತ್ರ. ಲವರ್‌ಬಾಯ್‌ ಮತ್ತು ಆ್ಯಕ್ಷನ್‌ ಲುಕ್‌ ಎರಡೂ ನನ್ನ ಪಾತ್ರಕ್ಕಿದೆ. ಮೊದಲ ಸಿನಿಮಾದಲ್ಲೇ ಅಭಿನಯಕ್ಕೆ ಸಾಕಷ್ಟು ಪ್ರಾಮುಖ್ಯತೆ ಇರುವಂಥ ಪಾತ್ರ ಸಿಕ್ಕಿರುವುದಕ್ಕೆ ಖುಷಿಯಾಗುತ್ತದೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂಥ ಕಥೆ ಮತ್ತು ಪಾತ್ರ ಸಿನಿಮಾದಲ್ಲಿದೆ. ಲವ್‌, ರೊಮ್ಯಾನ್ಸ್‌, ಆ್ಯಕ್ಷನ್‌, ಸಸ್ಪೆನ್ಸ್‌-ಥ್ರಿಲ್ಲರ್‌, ಎಮೋಶನ್ಸ್‌, ಕಾಮಿಡಿ ಎಲ್ಲವೂ ಕಥೆಯಲ್ಲಿದೆ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು ನಟ ಅಕ್ಷಿತ್‌.
    “ಸುಮಾರು ನಾಲ್ಕು ವರ್ಷಗಳ ಹಿಂದೆಯೇ ಈ ಸಿನಿಮಾ ಶುರುವಾಗಿತ್ತು. ಆದ್ರೆ ಕೋವಿಡ್‌ ಲಾಕ್‌ಡೌನ್‌ ಕಾರಣದಿಂದ ಸಿನಿಮಾ ರಿಲೀಸ್‌ ಆಗೋದಕ್ಕೆ ತಡವಾಯ್ತು. ಸ್ವಲ್ಪ ತಡವಾದರೂ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ ಎಂಬ ಭರವಸೆಯಲ್ಲಿ ಮೇ. 27ಕ್ಕೆ ಸಿನಿಮಾ ರಿಲೀಸ್‌ ಮಾಡುತ್ತಿದ್ದೇವೆ’ ಎಂಬುದು ಅಕ್ಷಿತ್‌ ಮಾತು.
    ಇನ್ನು “ಸೀತಾಯಣ’ ಚಿತ್ರದಲ್ಲಿ ನಾಯಕ ಅಕ್ಷಿತ್‌ ಶಶಿಕುಮಾರ್‌ಗೆ ನಾಯಕಿಯಾಗಿ ಅನಹಿತಾ ಭೂಷಣ್‌ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ವಿಕ್ರಂ ಶರ್ಮಾ, ಶರ್ಮಿತಾ ಗೌಡ, ಮಧು ಸೂದನ್‌, ಮೇಘನಾ ಗೌಡ, ಅಜಯ್‌ ಘೋಷ್‌, ಹಿತೇಶ್‌, ವಿಧೆಯುಲೇಖ ರಮನ್‌, ಬಿತ್ರಿಸತ್ತಿ, ಕೃಷ್ಣ ಭಗವಾನ್‌, ಅನಂತ ಬಾಬು, ಗುಂಡು ಸುದರ್ಶನ್‌, ಮಧುಮಣಿ, ಅಪ್ಪರಾವ್‌, ಲೋಬೋ ಮುಂತಾದವರು ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
    “ಸೀತಾಯಣ’ ಚಿತ್ರಕ್ಕೆ ಪ್ರಭಾಕರ್‌ ಆರಿಪ್ಕಾ ನಿರ್ದೇಶನ ಮಾಡುತ್ತಿದ್ದಾರೆ. “ಕಲರ್ ಕ್ಲೌಡ್ಸ್‌ ಎಂಟರ್‌ಟೈನ್ಮೆಂಟ್‌’ ಬ್ಯಾನರ್‌ನಲ್ಲಿ ಲಲಿತಾ ರಾಜಲಕ್ಷ್ಮೀ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. “ಸೀತಾಯಣ’ ಚಿತ್ರಕ್ಕೆ ಪದ್ಮನಾಭ್‌ ಭಾರದ್ವಾಜ್‌ ಸಂಗೀತ ಸಂಯೋಜಿಸಿದ್ದು, ಕವಿರಾಜ್‌, ಗೌಸ್‌ಪೀರ್‌ ಸಾಹಿತ್ಯವನ್ನು ರಚಿಸಿದ್ದಾರೆ.
    ಚಿತ್ರಕ್ಕೆ ದುರ್ಗಾಪ್ರಸಾದ್‌ ಕೊಳ್ಳಿ ಛಾಯಾಗ್ರಹಣ, ಪ್ರವೀಣ್‌ ಪುಡಿ ಸಂಕಲನವಿದೆ. ಬೆಂಗಳೂರು, ಮಂಗಳೂರು, ಆಗುಂಬೆ, ವೈಜಾಕ್‌, ಹೈದರಾಬಾದ್‌, ಬ್ಯಾಂಕಾಕ್‌ ಮೊದಲಾದ ಕಡೆಗಳಲ್ಲಿ ಸುಮಾರು 63 ದಿನಗಳ ಕಾಲ “ಸೀತಾಯಣ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಒಟ್ಟಾರೆ ಶಶಿಕುಮಾರ್‌ ಪುತ್ರನ ಚೊಚ್ಚಲ ಚಿತ್ರ “ಸೀತಾಯಣ’ ಹೇಗಿರಲಿದೆ ಎಂಬುದು ಈ ವಾರಾಂತ್ಯದಲ್ಲಿ ಗೊತ್ತಾಗಲಿದೆ.

    akshith shashikumar Entertainment seethayana kannada telugu movie
    Share. Facebook Twitter Pinterest LinkedIn Tumblr Email WhatsApp
    Previous Articleಪಾಲಿಕೆ ಕಚೇರಿಯಲ್ಲಿ ಗಲಾಟೆ ‘ಕಾರಿನ ಗಾಜು ಪುಡಿ ಪುಡಿ
    Next Article ವಾಸಂತಿ ನಲಿದಾಗ ತೆರೆಗೆ ಸಿದ್ಧ
    vartha chakra
    • Website

    Related Posts

    ಪಾಕ್ ಮೇಲಿನ ದಾಳಿಯ ಕೀರ್ತಿ ಯಾರಿಗೆ ಸೇರಬೇಕು ?

    ಮೇ 12, 2025

    ಪಾಕ್ ಮೇಲಿನ ದಾಳಿಯ ಕೀರ್ತಿ ಯಾರಿಗೆ ಸೇರಬೇಕು

    ಮೇ 12, 2025

    ಜಲಾಶಯಗಳಿಗೆ ಪ್ರವಾಸಿಗರು ಬರುವಂತಿಲ್ಲ

    ಮೇ 9, 2025

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಪಾಕ್ ಮೇಲಿನ ದಾಳಿಯ ಕೀರ್ತಿ ಯಾರಿಗೆ ಸೇರಬೇಕು ?

    ಪಾಕ್ ಮೇಲಿನ ದಾಳಿಯ ಕೀರ್ತಿ ಯಾರಿಗೆ ಸೇರಬೇಕು

    ಜನ ಸಾಮಾನ್ಯರೇ ಎಚ್ಚರ !

    ಯುದ್ದ ಆಗಬಹುದು ಹುಷಾರ್ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • JudsonMix ರಲ್ಲಿ ರಾಮಲಿಂಗಾರೆಡ್ಡಿ ಮಾಡಿದ ಅದ್ಭುತ ಕೆಲಸ | Ramalinga Reddy
    • JudsonMix ರಲ್ಲಿ ಇಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ಕರ್ಮಕಾಂಡ.
    • JudsonMix ರಲ್ಲಿ ಧರೆಗುರುಳಿದ ಭಾರೀ ಗಾತ್ರದ ತೇರು | Anekal
    Latest Kannada News

    ಪಾಕ್ ಮೇಲಿನ ದಾಳಿಯ ಕೀರ್ತಿ ಯಾರಿಗೆ ಸೇರಬೇಕು ?

    ಮೇ 12, 2025

    ಪಾಕ್ ಮೇಲಿನ ದಾಳಿಯ ಕೀರ್ತಿ ಯಾರಿಗೆ ಸೇರಬೇಕು

    ಮೇ 12, 2025

    ಜನ ಸಾಮಾನ್ಯರೇ ಎಚ್ಚರ !

    ಮೇ 12, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಅಬ್ಬಬ್ಬಾ ದಿನಕ್ಕೆ 2 5 ಕೋಟಿ! ಇದು ಬಾಲಯ್ಯ ಗತ್ತು!#viralvideo #jailer #movie #ntr #filmindustry #director
    Subscribe