ಬೆಂಗಳೂರು – ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಆಯಕಟ್ಟಿನ ಹುದ್ದೆಗಳಿಗಾಗಿ ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಲ್ಲಿ ಬಾರಿ ಪೈಪೋಟಿ ಉಂಟಾಗಿದೆ.
ಹಲವಾರು ಕಾರಣಗಳಿಂದ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅವಗಣನೆಗೆ ಒಳಗಾಗಿದ್ದ ಅಧಿಕಾರಿಗಳು ಪ್ರಮುಖ ಹುದ್ದೆ ಪಡೆಯುವ ನಿರೀಕ್ಷೆಯಲ್ಲಿದ್ದರೆ ಮತ್ತೆ ಕೆಲವರು ಆಯಕಟ್ಟಿನ ಹುದ್ದೆಗಾಗಿ ಲಾಬಿ ಆರಂಭಿಸಿದ್ದಾರೆ.
ಇಲ್ಲಿಯವರೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಪ್ರವೀಣ್ ಸೂದ್ ಅವರು ಸಿಬಿಐ ನಿರ್ದೇಶಕರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಸ್ಥಾನಕ್ಕೆ ಸೇವಾ ಜೇಷ್ಠತೆಯಲ್ಲಿ ಹಿರಿತನ ಹೊಂದಿದ್ದ ಅಲೋಕ್ ಮೋಹನ್ ಅವರನ್ನು ನೇಮಕ ಮಾಡಲಾಗಿದೆ.
ಅಲೋಕ್ ಮೋಹನ್ ಅವರು 1987 ರ ಬ್ಯಾಚ್ ನ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದು, ಸೇವಾ ಜೇಷ್ಠತೆ ಆಧಾರದಲ್ಲಿ ಅವರನ್ನೇ ಸರ್ಕಾರ ಡಿಜಿ-ಐಜಿಪಿ ಹುದ್ದೆಗೆ ಪರಿಗಣಿಸಿದೆ.
ಇದರ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹುದ್ದೆಗೂ ಹಲವರು ಪೈಪೋಟಿ ನಡೆಸಿದ್ದು ಸದ್ಯ ಗುಪ್ತದಳದ ಹಿರಿಯ ಅಧಿಕಾರಿಯಾಗಿರುವ ದಯಾನಂದ್ ಮತ್ತು ಸಿಐಡಿ ಮುಖ್ಯಸ್ಥ ಶರತ್ ಚಂದ್ರ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿದೆ.
ಹಾಗೆಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತರ ಹುದ್ದೆ ಬಿಡಿಎ ಮತ್ತು ಬೆಂಗಳೂರು ಜಲ ಮಂಡಳಿ ಆಯುಕ್ತರ ಹುದ್ದೆಗೆ ಹಲವರು ಪೈಪೋಟಿ ನಡೆಸಿದ್ದಾರೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಕೆಲವು ಪ್ರಮುಖ ಇಲಾಖೆಗಳ ಮುಖ್ಯಸ್ಥರಾಗಲು ಹಿರಿಯ ಐಎಎಸ್ ಅಧಿಕಾರಿಗಳು ಲಾಬಿ ಆರಂಭಿಸಿದ್ದಾರೆ
Previous Articleವಿದ್ಯುತ್ ಬಿಲ್ ಕಟ್ಟೋಲ್ಲ ಅಂತಾರೆ – ಏನು ಮಾಡೋದು?
Next Article ಕುಖ್ಯಾತ ರೌಡಿ ಅಲ್ಯುಮಿನಿಯಂ ಬಾಬು ಮಟಾಷ್