ಬೆಂಗಳೂರು,ಅ.17-ಕೋಟ್ಪಾ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದ 1051 ಕ್ಕೂ ಹೆಚ್ಚು
ಹೋಟೆಲ್, ಪಬ್, ಡಿಸ್ಕೋಥೆಕ್, ಹುಕ್ಕಾ ಬಾರ್ ಗಳ ವಿರುದ್ಧ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.
ನಗರದಲ್ಲಿರುವ ಪಬ್, ಡಿಸ್ಕೋಥೆಕ್, ಬಾರ್ & ರೆಸ್ಟೋರೆಂಟ್‍ಗಳಲ್ಲಿ ಕೋಟ್ಪಾ ಕಾಯೆಯಡಿಯಲ್ಲಿ, ಪ್ರತ್ಯೇಕ ಧೂಮಪಾನ ವಲಯ ನಿರ್ಮಾಣ ಮಾಡುವ ನಿಭಂದನೆಗಳ ಉಲ್ಲಂಘನೆ ವಿರುದ್ಧ ವಿಶೇಷ ಕಾರ್ಯಚರಣೆ ನಡೆಸಿರುವ ಸಿಸಿಬಿ (CCB) ಪೊಲೀಸರು ದಿಢೀರ್ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.
ಕೋಟ್ಪಾ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿ ಅವಧಿ ಮೀರಿ ತೆರೆದಿರುವುದು ಹಾಗೂ 18 ವರ್ಷದ ಕೆಳಗಿರುವವರಿಗೆ ತಂಬಾಕು/ಸಿಗರೇಟು, ಮದ್ಯ ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಹಾಗೂ ಅಬಕಾರಿ ಕಾಯ್ದೆಯನ್ನು ಉಲ್ಲಂಘಿಸಿದ್ದ ಹೋಟೆಲ್‍ಗಳು, ಪಬ್, ಡಿಸ್ಕೋಥೆಕ್‍ಗಳು, ಹುಕ್ಕಾ ಬಾರ್‍ಗಳ ಮೇಲೆ ದಾಳಿ ನಡೆಸಿ ಪ್ರಕರಣಗಳನ್ನು ದಾಖಲಿಸಿ ಕೋಟ್ಪಾ ಕಾಯ್ದೆಯಡಿಯಲ್ಲಿ ದಂಡವನ್ನು ವಿಧಿಸಲಾಗಿರುತ್ತದೆ.
ಕೋಟ್ಪಾ ಆಕ್ಟ್ ಅಡಿಯಲ್ಲಿ 5 ಪ್ರಕರಣಗಳ ಸಂಖ್ಯೆ 960,ಸಾರ್ವಜನಿಕ ತಿಳುವಳಿಕೆಗಾಗಿ “ಧೂಮಪಾನ ನಿಷೇದ” ಫಲಕಗಳನ್ನು ಅಳವಡಿಸಲಾದ ಸಂಖ್ಯೆ 4698 ಪ್ರಕರಣಗಳನ್ನು ದಾಖಲಿಸಲಾಗಿದೆ.
ನಿಯಮ ಉಲ್ಲಂಘಿಸಿರುವ ಹೋಟೆಲ್, ಪಬ್, ಡಿಸ್ಕೋಥೆಕ್‍ಗಳ ವಿರುದ್ದ ಈ ರೀತಿಯ ದಾಳಿಯು ಮುಂದುವರೆದಿದ್ದು ಹಾಗೂ ಪದೇ ಪದೇ ನಿಯಮ ಉಲ್ಲಂಘಿಸುವವರ ಮಾರಾಟ ಪರವಾನಗಿಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.