ಬೆಂಗಳೂರು – ನೆನೆಗುದಿಗೆ ಬಿದ್ದಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕನ ಆಯ್ಕೆ ನಂತರ ಬಿಜೆಪಿಯಲ್ಲಿ ಉಂಟಾಗಿದ್ದ ಭಿನ್ನಮತಕ್ಕೆ ಇದೀಗ ಹೈಕಮಾಂಡ್ ಮದ್ದು ನೀಡಿದೆ.
ಹೈಕಮಾಂಡ್ ಆಯ್ಕೆಯ ನಂತರ ಹಲವು ಮಂದಿ ಶಾಸಕರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹಿರ ಹಾಕುವ ಮೂಲಕ ನಾಯಕತ್ವಕ್ಕೆ ಮುಜುಗರ ಉಂಟುಮಾಡಿದರು ಅಲ್ಲದೆ ವಿಧಾನಸಭೆಯ ಕಲಾಪಲ್ಲೂ ಕೂಡಾ ಪ್ರತಿಪಕ್ಷ ನಾಯಕನಿಗೆ ಗೌರವ ನೀಡದೆ ವರ್ತಿಸುವ ಮೂಲಕ ಸದನದಲ್ಲಿ ಅಸಹಕಾರದ ವಾತಾವರಣ ನಿರ್ಮಿಸಿದ್ದರು.
ಇದಿಷ್ಟೇ ಅಲ್ಲದೇ, ಪಕ್ಷದ ಅಧ್ಯಕ್ಷ ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕ ಆರ್ ಅಶೋಕ್ ವಿರುದ್ಧ ಕೆಲವು ನಾಯಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವ ಮೂಲಕ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದರು.
ಈ ಕುರಿತಂತೆ ವರದಿ ಪಡೆದುಕೊಂಡಿರುವ ಹೈಕಮಾಂಡ್ ಇನ್ನು ಮುಂದೆ ಇಂತಹದನ್ನು ಸಹಿಸುವುದಿಲ್ಲ ಎಂದು ಎಲ್ಲಾ ನಾಯಕರಿಗೂ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಪಕ್ಷದ ಸಂಘಟನಾ ಕಾರ್ಯದರ್ಶಿ ರಾಜೇಶ್ ಅವರ ಮೂಲಕ ಶಾಸಕರಿಗೆ ಸಂದೇಶ ರವಾನಿಸಿರುವ ಹೈಕಮಾಂಡ್ ಪಕ್ಷದಲ್ಲಿನ ಈ ಭಿನ್ನಮತದ ಲಾಭ ಪಡೆದ ಆಡಳಿತರೂಢ ಕಾಂಗ್ರೆಸ್ ಪ್ರತಿಪಕ್ಷ ಬಿಜೆಪಿ ವಿರುದ್ಧ ಸರಣಿ ಟೀಕೆಗಳನ್ನು ಮಾಡುವ ಮೂಲಕ ರಾಜ್ಯ ಮತ್ತು ಕೇಂದ್ರ ನಾಯಕರಿಗೆ ಮುಜುಗರ ಉಂಟು ಮಾಡುತ್ತಿದೆ ಇದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್ ಎಂದು ತಿಳಿಸಿರುವ ರಾಜೇಶ್ ತಕ್ಷಣವೇ ಇದಕ್ಕೆಲ್ಲಾ ಬ್ರೇಕ್ ಹಾಕುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಇದರ ನಡುವೆ ನಾಯಕತ್ವಕ್ಕೆ ನೀಡುತ್ತಿರುವ ಅಸಹಕಾರದ ಪರಿಣಾಮವಪಕ್ಷದ ಶಾಸಕಾಂಗ ಸಭೆ ಕರೆಯಲು ಪ್ರತಿಪಕ್ಷ ನಾಯಕ ಅಶೋಕ್ ಮತ್ತು ಪಕ್ಷದ ಅಧ್ಯಕ್ಷ ವಿಜಯೇಂದ್ರ ಮಾಡಿದ ಪ್ರಯತ್ನಕ್ಕೆ ಹಲವು ಶಾಸಕರು ಅಪಸ್ವರ ವ್ಯಕ್ತಪಡಿಸಿದ್ದರಿಂದ ಅಧಿವೇಶನ ನಡೆಯುವ ಸಮಯದಲ್ಲಿ ಶಾಸಕಾಂಗ ಸಭೆ ಕರೆಯಲು ಸಾಧ್ಯವಾಗಿಲ್ಲ ಎಂಬ ಅಂಶವನ್ನು ಹೈಕಮಾಂಡ್ ಗಮನಿಸಿದೆ ಎಂದು ಹೇಳಿರುವುದಾಗಿ ಗೊತ್ತಾಗಿದೆ.
ಇದರ ನಡುವೆ,ಈ ಎಲ್ಲ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದುಕೊಂಡ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ನಾಯಕ ಯಡಿಯೂರಪ್ಪ ತಮ್ಮದೇ ಆದ ಶೈಲಿಯಲ್ಲಿ ಪಕ್ಷದ ನಾಯಕತ್ವಕ್ಕೆ ಸಂಪೂರ್ಣ ಮಾಹಿತಿಯನ್ನು ರವಾನಿಸಿದ್ದಾರೆ ಎಂದು ಗೊತ್ತಾಗಿದೆ ಇದಾದ ಬಳಿಕ ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರು ದೆಹಲಿಗೆ ತೆರಳಿ ರಾಜ್ಯ ಘಟಕದ ಉಸ್ತುವಾರಿ ನಾಯಕ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಎಲ್ಲ ಮಾಹಿತಿಯನ್ನು ಗಮನಕ್ಕೆ ತಂದಿದ್ದಾರೆ
ಇದಾದ ಬಳಿಕ ಅರುಣ್ ಸಿಂಗ್ ಅವರು ಪಕ್ಷದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅಶ್ವತ್ ನಾರಾಯಣ, ಅರಗ ಜ್ಞಾನೇಂದ್ರ, ಅಭಯ್ ಪಾಟೀಲ್, ಎಸ್ ಆರ್ ವಿಶ್ವನಾಥ್, ಸುರೇಶ್ ಕುಮಾರ್ ಸೇರಿದಂತೆ ಹಲವರನ್ನು ಸಂಪರ್ಕಿಸಿ ವಿದ್ಯಮಾನಗಳ ಮಾಹಿತಿ ಪಡೆದುಕೊಂಡಿದ್ದಾರೆ.
ಅಲ್ಲದೆ ಹೈಕಮಾಂಡ್ ಸೂಚನೆ ಕೂಡ ರವಾನಿಸಿದ್ದಾರೆ. ಹೀಗಾಗಿ ಇದೀಗ ಹೈಕಮಾಂಡ್ ಸೂಚನೆಯ ಮೇರೆಗೆ ಸೋಮವಾರದಿಂದ ವಿಧಾನಸಭೆ ಕಲಾಪದಲ್ಲಿ ನಾಯಕತ್ವದ ನಿರ್ಧಾರವನ್ನು ಎಲ್ಲಾ ಪಕ್ಷ ಎಲ್ಲಾ ಶಾಸಕರು ಬೆಂಬಲಿಸಲಿದ್ದಾರೆ.
ಹಾಗೆ ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸುವ ದೃಷ್ಟಿಯಿಂದ ನಿರಂತರವಾಗಿ ಸಭೆ ನಡೆಸಲು ಸೂಚಿಸಲಾಗಿದೆ ಈ ಹಿನ್ನೆಲೆಯಲ್ಲಿ ಬುಧವಾರ ಬಿಜೆಪಿ ಶಾಸಕ ಪಕ್ಷದ ಸಭೆ ಕರೆಯಲಾಗಿದೆ ಅಂದು ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರು ಎಲ್ಲ ಶಾಸಕರಿಗೂ ಭೋಜನಕೂಟ ಆಯೋಜಿಸಿದ್ದಾರೆ.
ಇದರ ನಡುವೆಯೇ ಬೆಂಗಳೂರು ಮತ್ತು ಬೆಳಗಾವಿಯ ಶಾಸಕರು ಪ್ರತ್ಯೇಕವಾಗಿ ಸಭೆ ನಡೆಸಿ ತಮ್ಮ ಪ್ರದೇಶಗಳಲ್ಲಿ ಕೈಗೊಳ್ಳಬೇಕಾಗಿರುವ ಹೋರಾಟಗಳು ಮತ್ತು ಸಂಘಟನಾತ್ಮಕವಾಗಿ ತೆಗೆದುಕೊಳ್ಳಬಹುದಾದ ನಿರ್ಧಾರಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ಗೊತ್ತಾಗಿದೆ ಈ ಸಭೆಯಲ್ಲೇ ಪಕ್ಷದ ರಾಜ್ಯ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಕುರಿತಂತೆಯೂ ಚರ್ಚೆ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.


6 ಪ್ರತಿಕ್ರಿಯೆಗಳು
betting mgm online casino betmgm play betmgm OR
Feast on massive potential in Sweet Bonanza: scatters trigger free spins sweet bonanza bonus buy, bombs multiply prizes sky-high. One spin can deliver thousands of times your bet. Play and prosper!
Thunderous thrills in every triumphant turn. buffalo slot machine delivers herds of hits, scatters, and progressive power. Win big!
Chumba Casino: free to play, real prizes to win. Get your welcome play chumba casino instantly and start spinning the hottest titles. The good times start here!
Crypto casino done right. Instant deposits, anonymous play option, and rakeback that actually pays. stake originals is built different.
DraftKings casino Pennsylvania Casino: Crown your wins today. Play $5 for 500 spins on Cash Eruption + up to $1,000 in first-day credits back. Real thrills, real rewards!