ಬೆಂಗಳೂರು,
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲಾಗಿದ್ದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಮಾರ್ಪಡಿಸಿ ಬಿಜೆಪಿ ನೇತೃತ್ವದ ಸರ್ಕಾರ ರೂಪಿಸಿರುವ ವಿಬಿಜಿ ರಾಮ್ ಜಿ ಯೋಜನೆಯನ್ನು ವಿರೋಧಿಸುತ್ತಿರುವ ರಾಜ್ಯ ಸರ್ಕಾರ ಇದೀಗ ಕರ್ನಾಟಕದ ರಾಜ್ಯಪಾಲರ ಮೂಲಕ ಯೋಜನೆಯನ್ನು ವಿರೋಧಿಸಲು ಕಾರ್ಯತಂತ್ರ ರೂಪಿಸಿದೆ.
ಕೇಂದ್ರ ಸರ್ಕಾರದ ವಿವಿಜಿ ರಾಮ್ ಜಿ ಯೋಜನೆ ರದ್ದುಪಡಿಸಿ ಈ ಹಿಂದಿನ ಮನರೇಗಾ ಯೋಜನೆ ಮರು ಜಾರಿ ಮಾಡಬೇಕು ಎಂದು ಆಗ್ರಹಿಸುತ್ತಿರುವ ರಾಜ್ಯ ಸರ್ಕಾರ ಈ ಬಗ್ಗೆ ಕೇಂದ್ರದ ಮೇಲೆ ಒತ್ತಡ ಏರುವ ದೃಷ್ಟಿಯಿಂದ ವಿಧಾನಮಂಡಲದ ವಿಶೇಷ ಅಧಿವೇಶನ ಆಯೋಜಿಸಲು ತೀರ್ಮಾನಿಸಿದೆ.
ಸಂಪ್ರದಾಯ ಹಾಗೂ ನಿಯಮಾವಳಿಗಳಂತೆ ವರ್ಷದ ಮೊದಲ ಅಧಿವೇಶನವನ್ನು ರಾಜ್ಯಪಾಲರ ಭಾಷಣದಿಂದ ಆರಂಭಿಸಲಾಗುತ್ತದೆ ಬಿಜೆಪಿ ಸರ್ಕಾರ ನೇಮಿಸಿರುವ ಕರ್ನಾಟಕದ ರಾಜ್ಯಪಾಲ ತಾವರ ಚೆಂದ್ ಗೆಹ್ಲೋಟ್ ಅವರು ನಿಯಮಾವಳಿ ಪ್ರಕಾರ ವಿಧಾನ ಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡುವ ಮೂಲಕ ಅಧಿವೇಶನಕ್ಕೆ ಚಾಲನೆ ನೀಡಬೇಕು.
ಈ ನಿಯಮವನ್ನು ತನ್ನ ಅನುಕೂಲಕ್ಕೆ ಬಳಸಲು ನಿರ್ಧರಿಸಿರುವ ರಾಜ್ಯ ಸರ್ಕಾರ ಇದೀಗ ಬಿಜೆಪಿ ನಾಯಕರಾಗಿರುವ ರಾಜ್ಯಪಾಲ ತಾವರ ಚೆಂದ್ ಗೆಹ್ಲೋಟ್ ಅವರ ಮೂಲಕ ಕೇಂದ್ರ ಸರ್ಕಾರದ ಬಿಬಿಜಿ ರಾಮಜಿ ಯೋಜನೆಯನ್ನು ಖಂಡಿಸುವ ಹಾಗೂ ಮನರೇಗಾ ಮರುಜಾರಿಗೆ ಒತ್ತಾಯಿಸುವ ಭಾಷಣ ಮಾಡಿಸಲು ತೀರ್ಮಾನಿಸಿದೆ.
ಮನರೇಗಾ ಮರುಜಾರಿಗೆ ಒತ್ತಾಯಿಸುವ ದೃಷ್ಟಿಯಿಂದ ವಿಧಾನ ಮಂಡಲದ ಉಭಯ ಸದನಗಳ ವಿಶೇಷ ಅಧಿವೇಶನಕ್ಕೆ ರಾಜ್ಯ
ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಜನವರಿ 27ರಿಂದ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದೆ ಅಂದು ರಾಜ್ಯಪಾಲರು ಉಭಯ ಸದನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆನಂತರ 28 ಮತ್ತು 29 ರಂದು ಕೇಂದ್ರದ ವಿಬಿಜಿ ರಾಮ್ ಜಿ ಮಸೂದೆ ಬಗ್ಗೆ ಚರ್ಚೆ ನಡೆಯಲಿದೆ ನಂತರ ಎರಡು ದಿನ ವಿರಾಮ ನೀಡಲಿದ್ದು ಫೆಬ್ರವರಿಯಿಂದ ಮತ್ತೆ ಅಧಿವೇಶನ ಸಮಾವೇಶಗೊಂಡಿದೆ ಅದರಲ್ಲಿ ರಾಜ್ಯಪಾಲರ ಭಾಷಣಕ್ಕೆ ಒಂದನೇ ಸಲ್ಲಿಸುವ ನಿರ್ಣಯದ ಕುರಿತಂತೆ ಚರ್ಚೆ ನಡೆಯಲಿದೆ ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ.

