ಸ್ಯಾಂಡಲ್ವವುಡ್ ನ ಮೋಹಕತಾರೆ ರಮ್ಯಾ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ.ಈಗ ಒಂದು ಕುತೂಹಲಕರ ಹೇಳಿಕೆಯ ಮೂಲಕ ಸುದ್ದಿಯಲ್ಲಿದ್ದಾರೆ ಅದು ಏನೆಂದರೆ ತಾವು ಈ ಬಾರಿ ಯಾರಿಗೆ ಓಟ್ ಹಾಕುತ್ತೇನೆಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಅದು ತಿಳಿಯಬೇಕಾದರೆ ಈ ಸ್ಟೋರಿನಾ ನೋಡಿ ಹಾಗೆ ಇದನ್ನು ಶೇರ್ ಮಾಡಿ ಸಬ್ ಸ್ಕ್ರೈಬ್ ಮಾಡೋದನ್ನು ಮರೆಯಬೇಡಿ.
ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆರಾಯ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಗ್ರಾಮೀಣ ಪ್ರದೇಶದ ಜನತೆಯಂತೂ ವರುಣನ ಆರ್ಭಟಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ.
ಇನ್ನೂ ಮಹಾನಗರಿ ಬೆಂಗಳೂರಂತೂ ಅಧ್ವಾನ ನಗರಿಯಾಗಿದೆ.ಕಳೆದ ಮೂರು ವರ್ಷಗಳಿಂದಲೂ ಕುಂಟುತ್ತಾ ಸಾಗಿರುವ ರಸ್ತೆ ನಿರ್ಮಾಣ, ಒಳ ಚರಂಡಿ ಹೂಳೆತ್ತುವಿಕೆ,ಸ್ಮಾರ್ಟ್ ಸಿಟಿಯ ಕಾಮಗಾರಿಗಳು ಜನರನ್ನು ಹೈರಾಣಗೊಳಿಸಿವೆ.
ಜೂನ್ ನಿಂದ ಸುರಿಯುತ್ತಿರುವ ಮಳೆ ಕಾಮಗಾರಿ ವಿಳಂಬಕ್ಕೆ ಮತ್ತಷ್ಟು ಕೊಡುಗೆ ನೀಡಿದರೆ,ಕೆರೆ,ರಾಜಾ ಕಾಲುವೆ ಒತ್ತುವರಿ, ಹೂಳು ತುಂಬಿರುವ ಚರಂಡಿಗಳಿಂದಾಗಿ ಬೆಂಗಳೂರಿನ ಹಲವು ಬಡಾವಣೆಗಳು ನೀರಿನಿಂದ ಆವೃತವಾಗಿವೆ. ಇದರಿಂದ ನಗರದ ಜನತೆ ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಮಳೆಯಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತಿದ್ದು ಅದನ್ನು ನಿಭಾಯಿಸಲು ಹೆಣಗಾಡಿದ ಸಂಚಾರಿ ಪೊಲೀಸರು ಬೆಳ್ಳಂದೂರು ಕಡೆ ಬರಬೇಡಿ ಎಂದು ಜನರಿಗೆ ಮನವಿ ಮಾಡಿದ್ದಾರೆ.
ಹೊರವರ್ತುಲ ರಸ್ತೆಯಲ್ಲಿ ಬೆಳ್ಳಂದೂರಿನಿಂದ ಸಿಲ್ಕ್ ಬೋರ್ಡ್ ವರೆಗೆ ಅಲ್ಲಿಂದ ಕೆಆರ್ ಪುರಂ ವರೆಗೆ ಅಗತ್ಯವಿದ್ದರೆ ಮಾತ್ರ ವಾಹನ ಸಂಚಾರ ನಡೆಸಲು ಮನವಿ ಮಾಡಿದ್ದಾರೆ.
ಹೊರವರ್ತುಲ ರಸ್ತೆಯಲ್ಲಿ ಬೆಳ್ಳಂದೂರಿನಿಂದ ಸಿಲ್ಕ್ ಬೋರ್ಡ್, ಕೆಆರ್ ಪುರಂ ವರೆಗೆ ಅಪಾರ ಪ್ರಮಾಣದ ನೀರು ಮಳೆಯಿಂದ ತುಂಬಿದ್ದು ದ್ವಿಚಕ್ರ ವಾಹನ ಸವಾರರು ಸಂಚಾರ ಕಡಿಮೆ ಮಾಡಲು ಮನವಿ ಮಾಡಲಾಗಿದೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.
ಮಳೆ ಹೆಚ್ಚಾದ ವೇಳೆ ಹೊರವರ್ತುಲ ರಸ್ತೆಯನ್ನು ಬಿಟ್ಟು ಪರ್ಯಾಯ ರಸ್ತೆಯಲ್ಲಿ ಸಂಚರಿಸಬೇಕು ರಾತ್ರಿ ವೇಳೆ ಮಳೆ ಹೆಚ್ಚಾದರೆ ಯಾವುದೇ ಕಾರಣಕ್ಕೂ ಹೊರವರ್ತುಲ ರಸ್ತೆಗೆ ಬರದಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.
ಇದು ಒಂದೆಡೆಯಾದರೆ ಹೊರ ವರ್ತುಲ ರಸ್ತೆಯ ಐಟಿ ಕಂಪನಿಗಳ ಮುಖ್ಯಸರು , ಉದ್ಯಮಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿ ಸಮಸ್ಯೆ ಬಗೆಹರಿಸಲು ಕೋರಿದ್ದಾರೆ.ಇಲ್ಲಿರುವ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದರೆ ಹೇಳಿ ನಾವು ಬೇರೆ ರಾಜ್ಯಕ್ಕೆ ವಲಸೆ ಹೋಗುತ್ತೇವೆ ಎಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಇದೆಲ್ಲದರ ನಡುವೆ ಉದ್ಯಮಿ ಮೋಹನ್ ದಾಸ್ ಪೈ ಪ್ರಧಾನಿ ಮೋದಿ ಅವರ ಮಂಗಳೂರು ಭೇಟಿಯ ಸಮಯದಲ್ಲಿ ಬೆಂಗಳೂರಿನ ಅವ್ಯವಸ್ಥೆ ಬಗ್ಗೆ ಟ್ವೀಟ್ ಮಾಡಿ ಗಮನ ಸೆಳೆದರು.
ಇದೀಗ ಮೋಹಕತಾರೆ ರಮ್ಯ ಬೆಂಗಳೂರಿನ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದ್ದಾರೆ.ರಾಜಾಕಾಲುವೆ,ಕೆರೆ ಒತ್ತುವರಿ ತೆರವುಗೊಳಿಸಿ ಬೆಂಗಳೂರು ನೀರಿನಿಂದ ಮುಳುಗಡೆಯಾಗುವುದನ್ನು ತಪ್ಪಿಸಿ,ಇಲ್ಲಿನ ಸಂಚಾರ ದಟ್ಟಣೆ ನಿವಾರಿಸಲು ಕ್ರಮ ಕೈಗೊಳ್ಳಬೇಕು.ಇಲ್ಲಿನ ಸಮಸ್ಯ ಯಾರು ಬಗೆಹರಿಸುತ್ತಾರೋ ಅವರಿಗೆ ನಾನು ಓಟ್ ಹಾಕುತ್ತೇನೆ ಎಂದಿದ್ದಾರೆ. ಗೊತ್ತಾಯ್ತಲ್ಲ ಈಗ ರಮ್ಯಾ ಓಟ್ ಬೇಕಾದರೆ ಎನು ಮಾಡಬೇಕೂಂತ..
Previous ArticleBangalore drowned by the commission
Next Article ಕೊರಟಗೆರೆ-ಮಧುಗಿರಿಯಲ್ಲಿ ಜಲ ದಿಗ್ಬಂಧನ