ಬೆಂಗಳೂರು – ರಾಜ್ಯದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆ ಈ ಬಾರಿ ಹಲವಾರು ರೀತಿಯ ವಿಷಯಗಳಿಂದಾಗಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ, ವಿಚಾರ ವಿನಿಮಯಗಳಿಗೆ ವೇದಿಕೆಯಾಗಿ ಪರಿಣಮಿಸಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬ ಸದಸ್ಯ ಹಾಗೂ ಜಯದೇವ ಹೃದ್ರೋಗ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ. ಮಂಜುನಾಥ್ ಪರವಾದ ಮತ್ತು ವಿರುದ್ಧವಾದ ಚರ್ಚೆಗಳು ಬೆಂಗಳೂರು ಮಂಡ್ಯ ಹಾಸನ ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಮಂಜುನಾಥ್ ಅವರು ಚುನಾವಣೆಗೆ ಸ್ಪರ್ಧಿಸಿದ ಪರಿಣಾಮವಾಗಿ ಅವರು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿ ಮಾಡಿದ ಸಾಧನೆಗಳು, ಎದುರಿಸಿದ ಸವಾಲುಗಳು, ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ನಿರ್ಮಾಣವಾಗಿರುವ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಯಾಗಿರುವ ಜಯದೇವ ಆಸ್ಪತ್ರೆಯ ಕಟ್ಟಡ ಎಲ್ಲವೂ ಚರ್ಚೆಗೆ ಬರುತ್ತಿದೆ.
ಜಯದೇವ ಆಸ್ಪತ್ರೆ ಬನ್ನೇರುಘಟ್ಟ ರಸ್ತೆಯ ವಿಶಾಲವಾದ ಮೈದಾನದಲ್ಲಿ ತಲೆ ಎತ್ತುವುದಕ್ಕೆ ಮುನ್ನ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿನ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು ಇದನ್ನು ಬನ್ನೇರುಘಟ್ಟ ರಸ್ತೆಗೆ ವರ್ಗಾವಣೆ ಯಾಗುವುದೆ ಮಾಡಿ ಅದಕ್ಕಾಗಿ ಬೃಹತ್ ಕಟ್ಟಡ ನಿರ್ಮಿಸಿದ ಕೀರ್ತಿ ಯಾರಿಗೆ ಸಲ್ಲಬೇಕು ಎನ್ನುವ ವಿಷಯಗಳು ಕೂಡ ಚರ್ಚೆಗೆ ಗ್ರಾಸ ಒದಗಿಸಿದೆ.
ಬನ್ನೇರುಘಟ್ಟ ರಸ್ತೆಯಲ್ಲಿನ ಜಯದೇವ ಆಸ್ಪತ್ರೆ ಕಟ್ಟಡಕ್ಕೆ ನೀಲ ನಕ್ಷೆ ರೂಪಿಸಿ ಅದಕ್ಕೆ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸಿ ಶಂಕುಸ್ಥಾಪನೆ ನೆರವೇರಿಸಿ ಕಟ್ಟಡ ಕಾಮಗಾರಿ ಆರಂಭವಾಗುತ್ತಿದ್ದಂತೆ ಹಲವಾರು ಕಾರಣಗಳಿಂದ ಜಯದೇವ ಆಸ್ಪತ್ರೆ ನಿರ್ದೇಶಕ ಹುದ್ದೆಯಿಂದ ಹೊರಬಿದ್ದ ಡಾ. ಪ್ರಭುದೇವ್ ಅವರಿಗೆ ಈ ಆಸ್ಪತ್ರೆಯ ನಿರ್ಮಾಣದ ಶ್ರೇಯಸ್ಸು ಸಲ್ಲಬೇಕು ಎನ್ನುವ ವಾದವು ಕೇಳಿಬರುತ್ತಿದೆ.
ಜಯದೇವ ಆಸ್ಪತ್ರೆಯ ಹಿಂದಿನ ಯಶಸ್ಸು ಪ್ರಖ್ಯಾತಿ ಮತ್ತು ಜನಮನ್ನಣೆಗೆ ಡಾಕ್ಟರ್ ಮಂಜುನಾಥ್ ಕಾರಣವಾದ ಡಾಕ್ಟರ್ ಪ್ರಭುದೇವ್ ಕಾರಣವಾಯ ಎಂಬ ಕುರಿತಂತೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಬನ್ನೇರುಘಟ್ಟ ರಸ್ತೆಯಲ್ಲಿ ತಲೆ ಎತ್ತಿ ನಿಂತಿರುವ ಬೃಹತ್ ಕಟ್ಟಡ ಜಯದೇವ ಆಸ್ಪತ್ರೆ ನಿರ್ಮಾಣದ ಹಿಂದಿನ ಪ್ರೇರಕ ಶಕ್ತಿ ಹಾಗೂ ದೊಡ್ಡ ಪ್ರಮಾಣದ ನೆರವು ನೀಡಿದ ಟ್ರಸ್ಟ್ ಇಲ್ಲಿವರೆಗೆ ಅದು ತನ್ನ ಕೊಡುಗೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ ಪ್ರಚಾರದಿಂದ ದೂರ ಉಳಿದೆ ಜನಸೇವೆಗೆ ಇಂತಹ ದೊಡ್ಡ ಕೊಡುಗೆ ನೀಡಿದ ವ್ಯಕ್ತಿ ಮತ್ತು ಟ್ರಸ್ಟ್ ಯಾವುದೆಂದರೆ ಅದು ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಂಸದ ರೆಹಮಾನ್ ಖಾನ್ ಅವರ ಪತ್ನಿ ಶ್ರೀಮತಿ ಆಯೇಶಾ ರೆಹಮಾನ್ ಮತ್ತು ಅವರ ನೇತೃತ್ವದ ಟ್ರಸ್ಟ್.
ಶ್ರೀಮತಿ ಆಯೇಶಾ ರೆಹಮಾನ್ ಅವರ ನೇತೃತ್ವದ ಕೆಕೆ ಚಾರಿಟಬಲ್ ಟ್ರಸ್ಟ್ ಬಡವರು, ಶೋಷಿತರು, ಮತ್ತು ಅಲ್ಪಸಂಖ್ಯಾತರ ಶಿಕ್ಷಣ, ಆರೋಗ್ಯ, ವಸತಿ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ ಈ ಟ್ರಸ್ಟ್ ಮೂಲಕ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಡು ಬಡವರನ್ನು ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿದ್ದ ಜಯದೇವ ಆಸ್ಪತ್ರೆಗೆ ದಾಖಲಿಸಿ ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಈ ಟ್ರಸ್ಟ್ ಭರಿಸುತ್ತಿತ್ತು.
ಟ್ರಸ್ಟ್ ನ ಈ ಸೇವೆ ರಾಜ್ಯಾದ್ಯಂತ ಪ್ರಚಾರಗೊಂಡು ಬಡತನದಲ್ಲಿದ್ದ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ರೋಗಿಗಳು ಹೆಚ್ಚಿನ ಪ್ರಮಾಣದಲ್ಲಿ ನೆರವು ಬಯಸಿ ಬರತೊಡಗಿದರು ಆದರೆ ಎಲ್ಲರಿಗೂ ಈ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಸಿಕ್ಕಿತು ನೀಡಲು ಸಾಧ್ಯವಾಗುತ್ತಿರಲಿಲ್ಲ ಅದಕ್ಕೆ ಪ್ರಮುಖ ಕಾರಣ ಸ್ಥಳಾವಕಾಶ ಕೊರತೆ ಮತ್ತು ನುರಿತ ವೈದ್ಯರ ಕೊರತೆಯಾಗಿತ್ತು.
ಈ ಬಗ್ಗೆ ಒಂದು ಆಸ್ಪತ್ರೆಯ ನಿರ್ದೇಶಕರಾಗಿದ್ದ ಡಾ. ಪ್ರಭುದೇವ್ ಅವರಿಂದ ಮಾಹಿತಿ ಪಡೆದ ಶ್ರೀಮತಿ ಆಯೇಶಾ ರೆಹಮಾನ್ ಅವರು ತಾವು ಹೊಂದಿರುವ ಸಾರ್ವಜನಿಕ ಸಂಪರ್ಕ ಬಳಸಿ ಬನ್ನೇರುಘಟ್ಟ ರಸ್ತೆಯಲ್ಲಿನ ಸರ್ಕಾರಿ ಜಾಗದ ಬಗ್ಗೆ ಮಾಹಿತಿ ಪಡೆದು ಅಲ್ಲಿ ಆಸ್ಪತ್ರೆ ನಿರ್ಮಾಣ ಮಾಡಬಹುದು ಎಂಬ ವಿಷಯವನ್ನು ಡಾ. ಪ್ರಭುದೇವ್ ಅವರ ಗಮನಕ್ಕೆ ತರುತ್ತಾರೆ ಅದಕ್ಕೆ ಒಪ್ಪಿದ ಡಾ. ಪ್ರಭುದೇವ್ ಅವರು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ ವೇದಿಕೆಸುತ್ತಾರೆ ಆನಂತರ ಶ್ರೀಮತಿ ಆಯೇಶಾ ರೆಹಮಾನ್ ಅವರು ತಮ್ಮ ಟ್ರಸ್ಟ್ ಮೂಲಕ ಆಸ್ಪತ್ರೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುತ್ತಾರೆ ಆಸ್ಪತ್ರೆ ನಿರ್ಮಾಣದ ಮೊದಲ ದೇನಿಗೆ ನೀಡಿದ ಕೀರ್ತಿ ಶ್ರೀಮತಿ ಆಯೇಶಾ ರೆಹಮಾನ್ ಅವರಿಗೆ ಸಲ್ಲುತ್ತದೆ ಅವರು ತೋರಿದ ವಿಶೇಷ ಕಾಳಜಿ ಮತ್ತು ಪ್ರೀತಿಯಿಂದಾಗಿ ಇಂದು ಜಯದೇವ ಆಸ್ಪತ್ರೆ, ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರ ಸೇವೆಗೆ ಸಿದ್ಧವಾಗಿ ನಿಂತಿದೆ.