ಬೆಂಗಳೂರು,ಸೆ.4- ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿ ನಾಟಕವಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಖತರ್ನಾಕ್ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ನಗರ ಪೊಲೀಸರು ಮಂಡ್ಯದಲ್ಲಿ ಬಂಧಿಸಿದ್ದಾರೆ.
ಮಹೇಶ್ ಕೊಲೆಯಾದ ದುರ್ದೈವಿಯಾಗಿದ್ದು,ಕೃತ್ಯ ನಡೆಸಿದ ಮೃತನ ಪತ್ನಿ ಶಿಲ್ಪ ಹಾಗೂ ಆಕೆಯ ಪ್ರಿಯಕರನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಮೂಲದ ಮಹೇಶ್, ಶಿಲ್ಪಾಳನ್ನು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದ. ಮದುವೆಯಾದ ಬಳಿಕ ಇಬ್ಬರು ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು.
ಕಳೆದ ಸೆ.1ರಂದು ಮಹೇಶ್ನನ್ನ ಶಿಲ್ಪಾ ಹಾಗೂ ಪ್ರಿಯಕರ ಇಬ್ಬರು ಸೇರಿ ಕೊಲೆ ಮಾಡಿ, ನಂತರ ಫಿಟ್ಸ್ ಬಂದು ಮೃತಪಟ್ಟಿದ್ದಾನೆಂದು ನಾಟಕವಾಡಿ, ಮೃತದೇಹವನ್ನು ಶಿಲ್ಪಾ ಮಹೇಶ್ ಹುಟ್ಟೂರಿಗೆ ತೆಗೆದುಕೊಂಡು ಹೋಗಿದ್ದಳು. ಈ ವೇಳೆ ಅನುಮಾನಗೊಂಡ ಮಹೇಶ್ ಪಾಲಕರು ಮೃತದೇಹವನ್ನು ಪರೀಕ್ಷಿಸಿದ್ದರು.
ಮೃತದೇಹದ ಮೇಲೆ ಗಾಯಗಳು ಪತ್ತೆಯಾದ ಬಳಿಕ ಮಂಡ್ಯ ಪೊಲೀಸರಿಗೆ ಪಾಲಕರು ಮಾಹಿತಿ ನೀಡಿದರು. ಬಳಿಕ ಶಿಲ್ಪಾಳನ್ನು ವಶಕ್ಕೆ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ನಂತರ ಪ್ರಕರಣವನ್ನು ಕೋಣನಕುಂಟೆ ಠಾಣೆಗೆ ಮಂಡ್ಯ ಪೊಲೀಸರು ವರ್ಗಾಯಿಸಿದ್ದರು. ಇದೀಗ ಕೋಣನಕುಂಟೆ ಪೊಲೀಸರು ಶಿಲ್ಪಾ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ
Previous Articleಸೋನಾಲಿ ಪೋಗಟ್ ಸಾವಿನ ದಾಖಲೆಗಳು ಪತ್ತೆ
Next Article Doctor ಅಂತ ಅವನು ಮಾಡಿದ್ದೇನು..?