ಬೆಂಗಳೂರು: ಸರ್ಕಾರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅತಿಗಣ್ಯರೂ ಸೇರಿ ಅತಿಥಿಗಳ ಆತಿಥ್ಯಕ್ಕಾಗಿ ತರಿಸಲಾಗಿದ್ದ ಸಸ್ಯಹಾರಿ ಊಟದಲ್ಲಿ ದೊಡ್ಡ ಗಾತ್ರದ ಹುಳ ಪತ್ತೆಯಾಗಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.
ಇನ್ನೂ ತಾವು ತಂದಿದ್ದ ಊಟದಲ್ಲಿ ಹುಳ ಸಿಕ್ಕಿದ್ದನ್ನು ಕಂಡ ಕೇಟರಿಂಗ್ ಸಿಬ್ಬಂದಿ ಎನಾಗುತ್ತಿದೆ ಎಂದು ಎಲ್ಲರೂ ವಿಚಾರಿಸುತ್ತಿರುವಾಗಲೆ ತಮ್ಮ ಪಾತ್ರೆಗಳನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಬೆಂಗಳೂರಿನ ಚಾಲುಕ್ಯ ವೃತ್ತದ ಸಮೀಪದಲ್ಲಿರುವ ಬಾಲುಬ್ರೂಯಿ ಅತಿಥಿಗೃಹ ಕಟ್ಟಡವನ್ನು ಪಾರಂಪರಿಕ ವಿನ್ಯಾಸಕ್ಕೆ ಒಳಪಟ್ಟು ನವೀಕರಣ ಮಾಡಲಾಗುತ್ತಿದೆ.
ಈ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಈ ಹಿನ್ನೆಲೆ ಅತಿಥಿಗಳಿಗೆ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದೇ ಅಥಿತಿಗೃಹದ ಆವರಣದಲ್ಲಿ ಉಪಹಾರ ವ್ಯವಸ್ಥೆ ಮಾಡಲಾಗಿತು, ಉಪಹಾರ ವ್ಯವಸ್ಥೆಯನ್ನು ಬೆಂಗಳೂರಿನ ಮೆಜೆಸ್ಟಿಕ್ ಸಮೀಪದಲ್ಲಿರುವ ಸೌತ್ ರುಚಿ ರೆಸ್ಟೋರೆಂಟ್ ನಿಂದ ತರಿಸಲಾಗಿತ್ತು.
ಊಟ ಸೇವಿಸುತ್ತಿದ್ದ ಒಬ್ಬರ ತಟ್ಟೆಯಲ್ಲಿದ್ದ
ಆಹಾರದಲ್ಲಿ ಬಿಳಿ ಬಣ್ಣದ ಉದ್ದನೆಯ ಹುಳವೊಂದು ಸತ್ತಿರುವ ರೀತಿಯಲ್ಲಿ ಪತ್ತೆಯಾಗಿದೆ.
ಈ ಸಂಬಂಧ ಸೌತ್ ರುಚಿ ಹೋಟೆಲ್ ನ ಕ್ಯಾಟರಿಂಗ್ ಉಸ್ತುವಾರಿ ವಹಿಸಿಕೊಂಡಿರುವ ವೀರೇಶ್ ಅವರನ್ನು ಕೇಳಿದಾಗ ಹಾರಿಕೆಯ ಉತ್ತರವನ್ನು ನೀಡಿರುವುದು ಕಂಡುಬಂತು, ಸಾಂಬಾರ್ ನಲ್ಲಿ ಹುಳ ಪತ್ತೆಯಾಗಿರುವುದು ಮರದ ಮೇಲಿಂದ ಬಿದ್ದಿದೆ ಎಂದು ಸಬೂಬು ನೀಡಿದರು. ಹೋಟೆಲ್ ಮಾಲೀಕರ ದೂರವಾಣಿ, ಮಾಲೀಕರನ್ನು ಕೇಳಿದಾಗ ಯಾವುದೇ ಉತ್ತರ ನೀಡದೆ ಹಾತಿಕೆ ಉತ್ತರ ನೀಡಿದರು.
ಆಹಾರ ಪದಾರ್ಥದಲ್ಲಿ ಹುಳು ಪತ್ತೆಯಾಗಿರುವ ಬಗ್ಗೆ ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್ ಅವರ ಗಮನಕ್ಕೆ ಬರುತ್ತಿದ್ದಂತೆ ಕ್ಯಾಟ್ರಿಂಗ್ ಉಸ್ತುವಾರಿ ವಹಿಸಿಕೊಂಡಿರುವ ಸಿಬ್ಬಂದಿ ವಿರುದ್ಧ ಗರಂ ಆದರು, ಹೋಟೆಲ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ಅಷ್ಟರ ವೇಳೆಗೆ ಕ್ಯಾಟರಿ ಹುಡುಗರು ಅಲ್ಲಿಂದ ಗಂಟು ಮೂಟೆ ಕಟ್ಟಿಕೊಂಡು ಸ್ಥಳ ಖಾಲಿ ಮಾಡಿದರು.
6 ಪ್ರತಿಕ್ರಿಯೆಗಳು
электрокарниз электрокарниз .
вывод из запоя в ростове-на-дону вывод из запоя в ростове-на-дону .
вывод из запоя в стационаре анонимно вывод из запоя в стационаре анонимно .
способ заработка в интернете http://www.kak-zarabotat-v-internete12.ru .
дешевые семена почтой с бесплатной доставкой https://semenaplus74.ru .
частная скорая наркологическая помощь частная скорая наркологическая помощь .