ಮೈಸೂರು,ಅ.19-
ಶೀಗೆ ಹುಣ್ಣಿಮೆಯಂದು ಭೂಮಿ ತಾಯಿಯನ್ನು
ಪೂಜಿಸಿ ಆರಾಧಿಸುತ್ತಾರೆ.ಬದುಕಲು ಅವಕಾಶ ಮಾಡಿಕೊಟ್ಟ ಭೂದೇವಿಗೆ ಶೀಗೆ ಹುಣ್ಣಿಮೆಯಂದು ಪೂಜೆ ಸಲ್ಲಿಸಿ ಕೃತಜ್ಞತೆ ಅರ್ಪಿಸುವುದು ಸಂಪ್ರದಾಯ ಇದರ ಜೊತೆಗೆ ತಮಗೆ ಯಾವುದೇ ರೀತಿಯ ಕಷ್ಟಗಳು ಬಾರದಂತೆ ಕಾಪಾಡು ಎಂದು ಭೂದೇವಿಯನ್ನು ಪ್ರಾರ್ಥಿಸುತ್ತಾರೆ.
ಇಂತಹ ಪವಿತ್ರ ಶೀಗೆ ಹುಣ್ಣಿಮೆಯಂದು ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಹೊರ ವಲಯದಲ್ಲಿ ನಾಗರಿಕ ಸಮಾಜ ಬೆಚ್ಚಿ ಬೀಳುವಂತಹ ಧಾರುಣ ಘಟನೆ ನಡೆದಿದೆ
ಜ್ಯೋತಿಷಿ ಒಬ್ಬನ ಮಾತು ಕೇಳಿ ನಿಧಿಯ ಆಸೆಗಾಗಿ ಹುಣ್ಣಿಮೆಯ ದಿನದಂದು ವಾಮಾಚಾರ ಮಾಡಿ ಕೂಲಿ ಕಾರ್ಮಿಕನೊಬ್ಬನನ್ನು ಬಲಿ ನೀಡಿರುವ ಭೀಕರ ಘಟನೆ ನಂಜನಗೂಡು ತಾಲೂಕಿನ ಹುಲ್ಲಳ್ಳಿ ಬಳಿ ನಡೆದಿದೆ.
ಮಲ್ಕುಂದಿ ಗ್ರಾಮದ ಕಟ್ಟಡ ಕಾರ್ಮಿಕ
ಸದಾಶಿವ(45) ವಾಮಾಚಾರಕ್ಕೆ ಬಲಿಯಾದ ದುರ್ದೈವಿಯಾಗಿದ್ದಾರೆ
ಸದಾಶಿವ ಅವರನ್ನು ಯಾಮಾರಿಸಿದ ದುಷ್ಕರ್ಮಿಗಳು ಅವರನ್ನು ಮೂರು ದಾರಿ ಕೂಡುವ ಸ್ಥಳಕ್ಕೆ ಕರೆದು ಕೊಂಡು ಹೋಗಿ ವಾಮಾಚರ ನಡೆಸಿ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಹೊಲಕ್ಕೆ ಹೋಗುತ್ತಿದ್ದಾಗ ಸ್ಥಳೀಯರೊಬ್ಬರು ರಕ್ತದ ಮಡುವಿನಲ್ಲಿ ಬಿದ್ಜಿದ್ದ ದೇಹವನ್ನುಗಮನಿಸಿ ಆತಂಕಗೊಂಡು ಕೂಡಲೇ ಗ್ರಾಮಸ್ಥರಿಗೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಹುಲ್ಲಳ್ಳಿ ಠಾಣೆಯ ಪಿಎಸ್‌ಐ ಚೇತನ್‌ಕುಮಾರ್ ಹಾಗೂ ಇತರ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿದಾಗ ವೀಳ್ಯದೆಲೆ, ಅಡಿಕೆ, ನಿಂಬೆಹಣ್ಣು ಮತ್ತು 101 ರೂ.ಗಳ ಜೊತೆಗೆ ಮಾಟಮಂತ್ರದ ಆಚರಣೆಗೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿದೆ.
ತಕ್ಷಣವೇ ನಂಜನಗೂಡು ಜನರಲ್ ಆಸ್ಪತ್ರೆಗೆ ಸದಾಶಿವ ಅವರನ್ನು ಸಾಗಿಸಲು ಪ್ರಯತ್ನಿಸಿದ್ದಾರೆ ಆದರೆ ಆವೇಳೆಗಾಗಲೇ ಸದಾಶಿವ ಮೃತಪಟ್ಟಿದ್ದರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ನಂಜನಗೂಡು ಡಿಎಸ್ಪಿ ರಘು ನೇತೃತ್ವದ ಪೊಲೀಸ್ ತಂಡ ಹೆಚ್ಚಿನ ತನಿಖೆ ನಡೆಸುತ್ತಿದೆ. ಈ ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
Previous Articleಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಈಶ್ವರಪ್ಪ.
Next Article ಪ್ರಹ್ಲಾದ ಜೋಶಿ ಸೋದರ ಬಂಧನ.