ಚಿಕ್ಕಮಗಳೂರು,ಫೆ.28-
ಶಿಕಾರಿಗೆಂದು ಹೋದವರು ಮುಳ್ಳು ಹಂದಿ ಅಡಗಿದ್ದ ಸುರಂಗಕ್ಕೆ ನುಗ್ಗಿ ವಾಪಸ್ ಬರಲೇ ಇಲ್ಲ. ಬೇಟೆಯಾಡುವ ವೇಳೆ ಏಟು ತಿಂದ ಮುಳ್ಳು ಹಂದಿ
ಭಯದಿಂದ ಸುರಂಗದೊಳಗೆ ನುಗ್ಗಿದೆ ಸಾಯುವ ಸ್ಥಿತಿಯಲ್ಲಿದ್ದ ಹಂದಿಯನ್ನು ಹೊರಗೆ ತರಲು ಸುರಂಗದೊಳಗೆ ನುಗ್ಗಿದ ಇಬ್ಬರು ಕೂಲಿ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಮಾಳಿಗನಾಡು ಬಳಿ ನಡೆದಿದೆ.
ಮೃತರನ್ನು ಮಾಳಿಗನಾಡು ಸಮೀಪದ ಆನೆಗುಂಡಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ವಿಜಯ್(28) ವರ್ಷ, ಶರತ್(26) ಎಂದು ಗುರುತಿಸಲಾಗಿದೆ.
ಕಾಳು ಮೆಣಸು ಕುಯ್ಯಲು ಬಂದಿದ್ದ ತಮಿಳುನಾಡಿನ ಕಾರ್ಮಿಕರು ಮುಳ್ಳು ಹಂದಿ ಶಿಕಾರಿ ಮಾಡಲು ಗುಡ್ಡಕ್ಕೆ ತೆರಳಿದ್ದರು ಎನ್ನಲಾಗಿದೆ.
ಉಸಿರಾಡದೇ ಸಾವು:
ಸುರಂಗದ ಒಳಕ್ಕೆ ಹೊಗೆ ಹಾಕಿ ಇಬ್ಬರು ಅದರೊಳಗೆ ಸಿಕ್ಕಿದ್ದ ಹಂದಿಯನ್ನು ಹೊರಗೆಳೆಯಲು ನುಗ್ಗಿದ ಪರಿಣಾಮ ಹೊಗೆಯಿಂದ ಉಸಿರಾಡಲು ಸಾಧ್ಯವಾಗದೆ ಅದರೊಳಗೆ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಬಾಳೂರು ಸಬ್ ಇನ್ಸ್‌ಪೆಕ್ಟರ್ ಪವನ್ ಕುಮಾರ್, ಪೊಲೀಸರು ಮತ್ತು ಸ್ಥಳೀಯರು ಮೃತದೇಹ ಹೊರ ತೆಗೆದಿದ್ದಾರೆ.
ಮೂಡಿಗೆರೆ ತಾಲೂಕಿ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Previous ArticleDangerous ವ್ಯಕ್ತಿ Mumbai ಪ್ರವೇಶ- ಕಟ್ಟೆಚ್ಚರಕ್ಕೆ ಸೂಚನೆ
Next Article ಸ್ನೇಹಿತರ ಸವಾಲ್!
2 ಪ್ರತಿಕ್ರಿಯೆಗಳು
cost cheap clomid online clomiphene remedio can i buy generic clomid pill clomid medication can i buy generic clomid tablets clomiphene prices in south africa how can i get generic clomid price
With thanks. Loads of erudition!