Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಎಲ್ಲರಿಗೂ ಪ್ರಿಯ ಈ ವರ್ಗಾವಣೆ!
    ಬೆಂಗಳೂರು

    ಎಲ್ಲರಿಗೂ ಪ್ರಿಯ ಈ ವರ್ಗಾವಣೆ!

    vartha chakraBy vartha chakraಜುಲೈ 16, 2023Updated:ಜುಲೈ 16, 20234 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು – ರಾಜ್ಯ ಸರ್ಕಾರದ ವಿವಿಧ ಇಲಾಖೆಯ ನೌಕರರ ವರ್ಗಾವಣೆಯಲ್ಲಿ ಭಾರಿ ಪ್ರಮಾಣದ ಗೋಲ್ ಮಾಲ್ ನಡೆಯುತ್ತಿರುವ ಆರೋಪ ಕೇಳಿಬಂದಿದೆ.
    ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಆಡಳಿತ ಯಂತ್ರದಲ್ಲಿ ಕೊಂಚ ಬದಲಾವಣೆ ಸಹಜ.ಕೆಲವು ಅಧಿಕಾರಿಗಳು ಆ ಕಡೆಯಿಂದ ಈ ಕಡೆಗೆ,ಈ ಕಡೆಯಿಂದ ಆ ಕಡೆಗೆ ವರ್ಗಾಯಿಸಲ್ಪಡುತ್ತಾರೆ.
    ಇಂತಹ ವರ್ಗಾವಣೆ ಸಮಯದಲ್ಲಿ ಅಲ್ಪ-ಸ್ವಲ್ಪ ಹಣಕಾಸಿನ ವಹಿವಾಟು ಕೂಡ ನಡೆಯುತಿತ್ತು. ಆದರೆ,ಇತ್ತೀಚೆಗೆ ವರ್ಗಾವಣೆ ಎಂದರೆ ಕೇವಲ ಹಣ ಮಾಡುವ ದಂಧೆ‌ ಎಂಬಂತಾಗಿದೆ ಎನ್ನುವ ದೂರುಗಳು ಮಾಮೂಲಿಯಾಗಿವೆ.
    ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ತನ್ನ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಇದಕ್ಕೆ ಸಂಪೂರ್ಣ ಕಡಿವಾಣ ಹಾಕುವುದಾಗಿ ಹೇಳಿದ್ದರು.
    ಅದರಲ್ಲೂ ಅಂದು‌ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರಂತೂ ಇದರ ವಿರುದ್ಧ ಸಮರವೇ ಘೋಷಿಸಿದ್ದರು,ಇದೀಗ ಇವರ ನೇತೃತ್ವದಲ್ಲೇ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.ಇವರ ಮೂಗಿನ ಅಡಿಯಲ್ಲೇ ಎಲ್ಲವೂ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
    ಸಾರ್ವತ್ರಿಕ ವರ್ಗಾವಣೆ ಗೆ ಆದೇಶ ಹೊರಡಿಸಿ,ಅದಕ್ಕೆ ವಿಧಿಸಲಾದ ಅಂತಿಮ ಗಡುವು ಎಂದೋ ಮುಗಿದು ಹೋಗಿದೆ.ಆದರೂ ವರ್ಗಾವಣೆ ನಿಂತಿಲ್ಲ.ಮಂತ್ರಿಗಳ ಕಚೇರಿ, ಮನೆಗಳ ಮುಂದೆ ವರ್ಗಾವಣೆ ಬಯಸುವ ಅಧಿಕಾರಿಗಳು, ಅವರ ಆಪ್ತರು,ಮಧ್ಯವರ್ತಿಗಳದೊಡ್ಡ ದಂಡೇ ನೆರದಿರುತ್ತದೆ.ಮುಖ್ಯಮಂತ್ರಿಗಳ ಸಚಿವಾಲಯವಂತೂ ವರ್ಗಾವಣೆ ಶಿಫಾರಸ್ಸು ಪತ್ರಗಳಿಂದ ತುಂಬಿ ಹೋಗಿದೆ.
    ಈ ಎಲ್ಲಾ ಅಂಶಗಳ ನಡುವೆ,
    ಅಬಕಾರಿ, ಗೃಹ, ಕಂದಾಯ, ಆರೋಗ್ಯ, ಸಮಾಜ ಕಲ್ಯಾಣ, ನಗರಾಭಿವೃದ್ಧಿ, ಇಂಧನ, ಲೋಕೋಪಯೋಗಿ, ನೋಂದಣಿ ಮತ್ತು ಮುದ್ರಾಂಕ, ಸೇರಿ ಇತರ ಇಲಾಖೆಗಳಲ್ಲೂ ವರ್ಗಾವಣೆಗೆ ಸಂಬಂಧಿಸಿದಂತೆ ಭಾರೀ ಪ್ರಮಾಣದ ಹಣದ ವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ.
    ಗೃಹ ಇಲಾಖೆಯಲ್ಲಿ ಐಪಿಎಸ್, ಎಸಿಪಿ, ಡಿಸಿಪಿ, ಡಿವೈಎಸ್ಪಿ, ಇನ್ಸ್‍ಪೆಕ್ಟರ್ ಹುದ್ದೆಗಳಿಗೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಜಿಲ್ಲಾ ನೋಂದಾಣಿಕಾರಿಗಳು, ಉಪ ನೋಂದಾಣಿಕಾರಿ ಹುದ್ದೆ, ಕಂದಾಯ ಇಲಾಖೆಯ ತಹಸೀಲ್ದಾರ್ ಗ್ರೇಡ್-1, ತಹಸೀಲ್ದಾರ್‍ ಗ್ರೇಡ್-2, ಉಪ ತಹಸೀಲ್ದಾರ್ ಹುದ್ದೆ, ಇಂಧನ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಅಧೀಕ್ಷಕ ಇಂಜಿನಿಯರ್ ಹುದ್ದೆಗಳ ವರ್ಗಾವಣೆಗೆ ನಿರ್ಧಿಷ್ಟ ಲಂಚ ನಿಗದಿಪಡಿಸಲಾಗಿದೆ ಎಂಬ ಮಾತುಗಳು ವಿಧಾನಸೌಧದ ಗೋಡೆಗಳಲ್ಲಿ ಕೇಳಿ ಬರುತ್ತಿವೆ.
    ಅಬಕಾರಿ ಇಲಾಖೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಸನ್ನದು ಸಂಖ್ಯೆಗಳ ಅನುಗುಣವಾಗಿ ಪ್ರತಿ ಅಬಕಾರಿ ಉಪ ಆಯುಕ್ತರ ಹುದ್ದೆಗೆ 1.5 ಕೋಟಿ ರೂ.ನಿಂದ 2.5 ಕೋಟಿ ರೂ.ವರೆಗೆ ನಿಗದಿ ಮಾಡಲಾಗಿದೆ ಎಂಬುದು ವ್ಯಾಪಕವಾಗಿ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
    ಬೆಂಗಳೂರಿನ ವಿವಿಧ ವಿಭಾಗದ ಪ್ರತಿ ಅಬಕಾರಿ ಉಪ ಆಯುಕ್ತ ಹುದ್ದೆಗೆ ಬರೋಬ್ಬರಿ 3 ಕೋಟಿ ರೂ. ನಿಗದಿಗೊಳಿಸಲಾಗಿದೆ ಎನ್ನಲಾಗಿದೆ.
    ರಾಜ್ಯ ವಿಧಾನಸಭೆ ಚುನಾವಣೆ ಮುನ್ನ ಕೆಲ ಅಧಿಕಾರಿಗಳಿಂದ ಪದೋನ್ನತಿ ನೀಡಿ ವರ್ಗಾವಣೆಗೆ ಕೋಟ್ಯಂತರ ರೂ. ಲಂಚ ವಸೂಲಿ ಮಾಡಲಾಗಿತ್ತು ಎಂಬ ಆರೋಪವು ಕೇಳಿಬರುತ್ತಿದೆ. ಆದರೆ, ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ಆಗಲಿಲ್ಲ. ಇತ್ತ ವರ್ಗಾವಣೆಯಾಗದೆ ಅತ್ತ ಕೊಟ್ಟ ಹಣವೂ ಸಿಗದೆ ಒದ್ದಾಡುತ್ತಿರುವ ಕೆಲ ಅಧಿಕಾರಿಗಳು, ಈಗ ವರ್ಗಾವಣೆಗೆ ಮತ್ತೊಮ್ಮೆ ಭಾರೀ ಪ್ರಮಾಣದ ಹಣ ಕೊಡಬೇಕಾದ ಪರಿಸ್ಥಿತಿಯಲ್ಲಿ
    ಗ್ರೂಪ್ ಎ, ಬಿ ಹುದ್ದೆಯ ಅಕಾರಿಗಳು ಲಾಭದಾಯಕ ಹುದ್ದೆಗಳ ಮೇಲೆ ಕಣ್ಣಿಟ್ಟಿರುತ್ತಾರೆ. ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದವರು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪಕ್ಕೆ ಒಳಗಾದವರು. ಅಮಾನತ್ತಾದವರು ಲಾಭದಾಯಕ ಹುದ್ದೆಯಲ್ಲಿ ಕುಳಿತು ಕಾರ್ಯಾಭಾರ ಮಾಡುತ್ತಿರುವ ಪ್ರಕರಣಗಳು ಹೆಚ್ಚಿವೆ.
    ಸರ್ಕಾರದ ವಿವಿಧ ಇಲಾಖೆಗಳಲ್ಲಿ ಆಯುಕ್ತ, ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿಗಳು ಹೆಚ್ಚಾಗಿ ಪ್ರಭಾರ ಹುದ್ದೆಗಳಿಗೆ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.ಐಎಎಸ್ ಅಧಿಕಾರಿಗೆ ಯಾವುದಾದರೂ ಇಲಾಖೆಗಳಲ್ಲಿ ಒಂದು ಅಥವಾ ಎರಡು ಪ್ರಭಾರ ಹುದ್ದೆಗಳು ಇದ್ದೇ ಇರುತ್ತವೆ.ಇಂತಹವುಗಳಿಗೆ ಹೆಚ್ಚಿನ ಪೈಪೋಟಿ ಕಂಡುಬಂದಿದ್ದು ಭಾರಿ ಪ್ರಮಾಣದ ಹಣಕಾಸಿನ ವಹಿವಾಟು ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

    Verbattle
    Verbattle
    Verbattle
    ಆರೋಗ್ಯ ಕಾಂಗ್ರೆಸ್ ಚುನಾವಣೆ ರಾಜಕೀಯ ಲಂಚ ವ್ಯವಹಾರ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಲಾಭದಾಯಕ ಸಂಸ್ಥೆಯಾದ KREDL
    Next Article ಮೋದಿ ಮುಖ್ಯ ಅತಿಥಿಯಾಗಿದ್ದಕ್ಕೆ ವ್ಯಾಪಕ ಟೀಕೆ
    vartha chakra
    • Website

    Related Posts

    ಬೆಂಗಳೂರು ಕೆರೆಗಳಲ್ಲಿ ಬೋಟಿಂಗ್

    ಫೆಬ್ರವರಿ 20, 2026

    ಸೇವಾದಳ ಘಟಕಗಳ ವಿಸರ್ಜನೆ

    ಫೆಬ್ರವರಿ 19, 2026

    ರಾಹುಲ್ ಗಾಂಧಿಗೆ ಹೈಕೋರ್ಟ್ ನಲ್ಲಿ ಗೆಲುವು

    ಫೆಬ್ರವರಿ 19, 2026

    4 ಪ್ರತಿಕ್ರಿಯೆಗಳು

    1. Slfwto on ಫೆಬ್ರವರಿ 14, 2026 5:33 ಅಪರಾಹ್ನ

      mccluck login mcluckcasinogm mcluck Georgia

      Reply
    2. Weskos on ಫೆಬ್ರವರಿ 17, 2026 4:42 ಫೂರ್ವಾಹ್ನ

      wowvegasus is a popular sweepstakes communal casino gift at an end 1,500 exciting sulcus games and a enjoyment Vegas-style circumstance flatly release to play. Players fancy abundant bonuses like unshackled Sweepstakes Coins, with the chance to see through prizes legally in most US states.

      Reply
    3. Ollqbn on ಫೆಬ್ರವರಿ 18, 2026 1:34 ಅಪರಾಹ್ನ

      Experience the adrenaline from betting on your favorite games. In crown coin casino online, exclusive tournaments and promotions are available. Become part of the winners today!

      Reply
    4. Hhlrcb on ಫೆಬ್ರವರಿ 20, 2026 7:25 ಅಪರಾಹ್ನ

      Experience non-stop cascading action in Sweet Bonanza — the slot loved worldwide for its big-win potential. Trigger sweet bonanza casino free spins and watch prizes multiply like crazy. Your turn to win big!

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬಡವರ ಗ್ಯಾರಂಟಿ Vs ಶ್ರೀಮಂತರ ರಿಯಾಯಿತಿ: ನ್ಯಾಯ ಯಾರ ಪರ?

    ಎದ್ದು ನಿಂತ ಪಬ್ಲಿಕ್ ಟಿವಿ , ಕುಸಿದು ಬಿದ್ದ ಟಿವಿ9..!

    ಇನ್ ಸೈಟ್ ಐಎಎಸ್ ನ ಮಾದರಿ ನಡೆ

    ಸಫಾರಿ ಪ್ರಿಯರಿಗೆ ಸಿಹಿ ಸುದ್ದಿ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • винлаб промокод на скидку ರಲ್ಲಿ ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    • 모임술집 ರಲ್ಲಿ ಯಡಿಯೂರಪ್ಪ ಅವರನ್ನು ಅನುಕರಿಸುವ ವಿಜಯೇಂದ್ರ | Yediyurappa
    • AnthonyWig ರಲ್ಲಿ ಯಾರಾಗುತ್ತಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ.
    Latest Kannada News

    ಬಡವರ ಗ್ಯಾರಂಟಿ Vs ಶ್ರೀಮಂತರ ರಿಯಾಯಿತಿ: ನ್ಯಾಯ ಯಾರ ಪರ?

    ಫೆಬ್ರವರಿ 20, 2026

    ಎದ್ದು ನಿಂತ ಪಬ್ಲಿಕ್ ಟಿವಿ , ಕುಸಿದು ಬಿದ್ದ ಟಿವಿ9..!

    ಫೆಬ್ರವರಿ 20, 2026

    ಇನ್ ಸೈಟ್ ಐಎಎಸ್ ನ ಮಾದರಿ ನಡೆ

    ಫೆಬ್ರವರಿ 20, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.