Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » JDSನಲ್ಲಿ ಭವಾನಿ ರೇವಣ್ಣ ಸೃಷ್ಟಿಸಿದ ಸಂಚಲನ
    ಸುದ್ದಿ

    JDSನಲ್ಲಿ ಭವಾನಿ ರೇವಣ್ಣ ಸೃಷ್ಟಿಸಿದ ಸಂಚಲನ

    vartha chakraBy vartha chakraಜನವರಿ 31, 2023Updated:ಫೆಬ್ರವರಿ 5, 2023ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ರಾಜ್ಯ ರಾಜಕಾರಣದಲ್ಲಿ ಕಳೆದೆರಡು ವಾರಗಳಿಂದ ಅತಿ ಹೆಚ್ಚು ಚರ್ಚೆಯಲ್ಲಿರುವ ಪಕ್ಷ ಜಾತ್ಯಾತೀತ ಜನತಾದಳ ಮತ್ತು ಆ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ JDS ನೇತೃತ್ವದ ಸರ್ಕಾರ ನಿಶ್ಚಿತ ಹಾಗೂ ತಾವೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ಪಂಚರತ್ನ ಯಾತ್ರೆ ನಡೆಸುತ್ತಿರುವ ಕುಮಾರಸ್ವಾಮಿ, ಈಗಾಗಲೇ ತಮ್ಮ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
    ಇದರಲ್ಲಿ ತಮ್ಮ ಭದ್ರಕೋಟೆ ಹಾಸನ ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವ ಗೋಜಿಗೆ ಹೋಗಿಲ್ಲ. ಇದಕ್ಕೆ ಅವರು ಕೊಡುವ ಕಾರಣ ‘ಜಿಲ್ಲಾ ಘಟಕದಲ್ಲಿ ಕೆಲವು ಗೊಂದಲಗಳಿವೆ. ಕಳೆದ ಬಾರಿ ಆಯ್ಕೆಯಾಗಿರುವ ಕೆಲವರು ಪಕ್ಷ ಬಿಡುವುದಾಗಿ ಹೇಳುತ್ತಿದ್ದಾರೆ. ಅವರು ಹೋದ ನಂತರ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು’ ಎಂದಿದ್ದಾರೆ. ಆದರೆ ವಾಸ್ತವ ಇದಲ್ಲ, ಅದೇನೆಂದರೆ ಭವಾನಿ ರೇವಣ್ಣ.

    ಕಳೆದೊಂದು ದಶಕದವರಗೆ ತೆರೆಮರೆಯಲ್ಲಿ ರಾಜಕಾರಣ ಮಾಡುತ್ತಾ ತಮ್ಮ ಪತಿಗೆ ಬೆಂಗಾವಲಾಗಿ ನಿಂತಿದ್ದ ಭವಾನಿ ರೇವಣ್ಣ ರಾಜಕೀಯ ಪಟ್ಟುಗಳನ್ನು ಬಲ್ಲ ಚತುರೆ. ಎಚ್.ಡಿ.ರೇವಣ್ಣ ಅವರ ಯಶಸ್ಸಿನ ಗುಟ್ಟು ಭವಾನಿ ಎನ್ನುವುದು ಹಾಸನ ಜಿಲ್ಲೆ ಹಾಗೂ JDS ನ ಒಳ ರಾಜಕಾರಣ ಬಲ್ಲ ಹಲವರಿಗೆ ಗೊತ್ತಿರುವ ಸಂಗತಿ. ರಾಜಕಾರಣದಲ್ಲಿ ದೃಢ ನಿರ್ಧಾರಗಳ ಮೂಲಕ ಗುರುತಿಸಲ್ಪಡುವ ಭವಾನಿ ಅವರು ಅಭಿವೃದ್ಧಿ ಮತ್ತು ಆಡಳಿತಾತ್ಮಕ ವಿಷಯದಲ್ಲೂ ತಮ್ಮದೇ ದೃಷ್ಟಿಕೋನ ಹೊಂದಿದ್ದಾರೆ. ಇದರ ಪರಿಣಾಮವಾಗಿ ಈ ಹಿಂದೆ ತಮ್ಮ ತವರೂರು ಮೈಸೂರಿನ ಕೆ.ಆರ್.ನಗರದಿಂದ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದರು. ಆದರೆ ಆಗ JDS ನ ಟಿಕೆಟ್ ಆಕಾಂಕ್ಷಿಯಾಗಿದ್ದ ಸಾ.ರಾ.ಮಹೇಶ್ ಅವರಿಗಾಗಿ ತಮ್ಮ ಆಶೆಯನ್ನು ಅದುಮಿಟ್ಟುಕೊಂಡರು.

    ನಂತರದಲ್ಲಿ ಹಾಸನದಿಂದಲೇ ಕಣಕ್ಕಿಳಿಯಲು ಪ್ರಯತ್ನ ನಡೆಸಿದರೂ ಹಲವಾರು ಕಾರಣಗಳಿಂದ ಸಾಧ್ಯವಾಗದೆ ಜಿಲ್ಲಾ ಪಂಚಾಯತಿಗೆ ಸ್ಪರ್ಧಿಸಿ ಯಶಸ್ಸು ಕಂಡರು.
    JDS ವಿದ್ಯಮಾನಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಅವರು ಕೇವಲ ತಮ್ಮ ಪತಿಗೆ ಮಾತ್ರ ಬೆಂಗಾವಲಾಗಿ ನಿಂತಿಲ್ಲ, ಹಾಸನದ ಪಕ್ಷದ ವಿದ್ಯಮಾನಗಳ ಮೇಲೆ ತಮ್ಮದೇ ಹಿಡಿತ ಹೊಂದಿದ್ದು ಚಾಣಾಕ್ಷ ನಡೆಯ ಮೂಲಕ ಪಕ್ಷದ ಭದ್ರಕೋಟೆ ಅಲುಗಾಡದಂತೆ ನೋಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ರಾಜ್ಯ ಮಟ್ಟದಲ್ಲಿ ಪಕ್ಷದ ತೀರ್ಮಾನಗಳ ಸಮಯದಲ್ಲಿ ತಮ್ಮ ಮಾವ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರೊಂದಿಗೆ ಚರ್ಚಿಸಿ, ನೀಡುತ್ತಿದ್ದ ಸಲಹೆಗಳು ವಾಸ್ತವಕ್ಕೆ ಹತ್ತಿರವಷ್ಟೇ ಅಲ್ಲದೆ ಪರಿಣಾಮಕಾರಿಯಾಗಿಯೂ ಇರುತ್ತಿದ್ದವು. ಇದರಿಂದ ಅನೇಕ ಸಂದರ್ಭಗಳಲ್ಲಿ ದೇವೇಗೌಡರು ಇವರ ಸಲಹೆಗಾಗಿ ಕಾಯುತ್ತಿದ್ದರು. ಇದಿಷ್ಟೇ ಅಲ್ಲ, ಕಾರ್ಯಕರ್ತರನ್ನು ಇವರು ವಿಶ್ವಾಸಕ್ಕೆ ತೆಗೆದುಕೊಳ್ಳುವ ರೀತಿ, ಅವರಲ್ಲಿ ಹೋರಾಟ ಮತ್ತು ಆತ್ಮಸ್ಥೈರ್ಯ ಮೂಡಿಸುವ ನಿಟ್ಟಿನಲ್ಲಿ ಕೈಗೊಳ್ಳುವ ನಿರ್ಧಾರಗಳು ಇವರನ್ನು ಭರವಸೆಯ‌ ನಾಯಕಿ ಎಂದು ಪರಿಗಣಿಸುವಂತೆ ಮಾಡಿವೆ.

    ಈ ವೇಳೆ ನಡೆದ ಹಲವಾರು ವಿದ್ಯಮಾನಗಳು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಮುಜುಗರಕ್ಕೆ ಸಿಲುಕುವಂತೆ ಮಾಡಿವೆ. ಭವಾನಿ ರೇವಣ್ಣ ಅವರನ್ನು ಇದೇ ರೀತಿಯಲ್ಲಿ ಬಿಟ್ಟರೆ JDS ನಲ್ಲಿ ಮತ್ತೊಂದು ಅಧಿಕಾರ ಕೇಂದ್ರ ಸೃಷ್ಟಿಯಾಗಲಿದೆ ಎಂದು ಭಾವಿಸಿದ ಅವರು ಭವಾನಿ ಅವರ ಓಟಕ್ಕೆ ಕಡಿವಾಣ ಹಾಕಲು‌ ಮುಂದಾಗಿದ್ದಾರೆ. ಇದು ಈಗ ದೊಡ್ಡ ಗೌಡರ ಕುಟುಂಬದಲ್ಲಿ ಬಿರುಗಾಳಿ ಸೃಷ್ಟಿಸಿದೆ. ಇದೀಗ ಟಿಕೆಟ್‌ ಗಾಗಿ ಕಾದಾಟ ತೀವ್ರಗೊಂಡಿದೆ. ಹಾಸನದಲ್ಲಿ ನಾನು ಸ್ಪರ್ಧಿಸಿಯೇ ಸಿದ್ಧ ಎಂದು ಭವಾನಿ ಅವರು ಹಠಕ್ಕೆ ಬಿದ್ದರೆ, ಅಲ್ಲಿ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಡಲ್ಲ ಎಂದು ಕುಮಾರಸ್ವಾಮಿ ಜಿದ್ದಿಗೆ ಬಿದ್ದಿದ್ದಾರೆ. ಪರಿಣಾಮ ದಳಪತಿಗಳ ಕೋಟೆಯಲ್ಲಿ ಬಿರುಕು ಮೂಡಲು ಶುರುವಾಗಿದೆ.

    ಮತ್ತೊಂದೆಡೆ ಹಾಸನದಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ಕೊಡಬೇಕೆಂದು ಕಾರ್ಯಕರ್ತರು ಪಟ್ಟು ಹಿಡಿದು ಪ್ರತಿಭಟನೆ, ಹೋರಾಟಗಳನ್ನು ಮಾಡುತ್ತಿದ್ದಾರೆ. ಭವಾನಿ ಪರ ನಿಂತಿರುವ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹಾಗೂ ಬೆಂಬಲಿಗರು ‘ಕರ್ನಾಟಕದ ಅಮ್ಮಾ, ಭವಾನಿ ರೇವಣ್ಣ’ ಎಂದು ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಫೋಟೋ ಜೊತೆ ಭವಾನಿ ಫೋಟೋ ಸೇರಿಸಿ ವೈರಲ್ ಮಾಡುತ್ತಿದ್ದಾರೆ. ಕರ್ನಾಟಕದ ಮಹಿಳಾ ಶಕ್ತಿಗೆ ಮತ್ತೊಂದು ಭರವಸೆ ಅಮ್ಮಾ ಎಂದು ಪೋಸ್ಟ್ ಮಾಡಿದ್ದಾರೆ. ಹಾಸನದ ಮುಂದಿನ MLA ಭವಾನಿ ರೇವಣ್ಣ. ಇದು ಮಹಿಳೆಯರ ಕೋರಿಕೆ ಎಂದು ಹಕ್ಕೊತ್ತಾಯದ ಪೋಸ್ಟ್ ಗಳು ವೈರಲ್ ಆಗುತ್ತಿವೆ. ದಿನೇ ದಿನೇ ಭವಾನಿ ರೇವಣ್ಣಗೆ ಟಿಕೆಟ್ ಕೊಡಬೇಕೆಂದು ಭವಾನಿ ರೇವಣ್ಣ ಅವರ ಬೆಂಬಲಿಗರ ಒತ್ತಡ ಹೆಚ್ಚಾಗುತ್ತಿದೆ.
    ಹೀಗಾಗಿ JDS ನ ಮುಂದಿನ ವಿದ್ಯಮಾನಗಳು ಕುತೂಹಲ ಮೂಡಿಸಿವೆ.

    Bhavani revanna Election H D Kumaraswamy JDS m News Politics ಚುನಾವಣೆ ರಾಜಕೀಯ ವೈರಲ್ ಹಾಸನ
    Share. Facebook Twitter Pinterest LinkedIn Tumblr Email WhatsApp
    Previous Articleಚಿನ್ನದಂಗಡಿಗಳಿಗೆ IT shock!
    Next Article BJP ಯವರು ಎಡವಟ್ಟು ಗಿರಾಕಿಗಳು
    vartha chakra
    • Website

    Related Posts

    ಚೀನಾ ನಂಬಿ ಕೆಟ್ಟ ಪಾಪಿ ಪಾಕಿಸ್ತಾನ..!

    ಮೇ 9, 2025

    ವಿಮಾನ ಹತ್ತಲು ಮೂರು ಗಂಟೆ ಮೊದಲು ಹೋಗಿ

    ಮೇ 9, 2025

    ಜಲಾಶಯಗಳಿಗೆ ಪ್ರವಾಸಿಗರು ಬರುವಂತಿಲ್ಲ

    ಮೇ 9, 2025

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಚೀನಾ ನಂಬಿ ಕೆಟ್ಟ ಪಾಪಿ ಪಾಕಿಸ್ತಾನ..!

    ವಿಮಾನ ಹತ್ತಲು ಮೂರು ಗಂಟೆ ಮೊದಲು ಹೋಗಿ

    ಪೊಲೀಸರೇ ದರೋಡೆ ಮಾಡಿದ್ರಾ

    ಜಲಾಶಯಗಳಿಗೆ ಪ್ರವಾಸಿಗರು ಬರುವಂತಿಲ್ಲ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • ArchiePycle ರಲ್ಲಿ ವಲಸಿಗರ ನಡುವೆ ಜಿದ್ದಾಜಿದ್ದಿನ ಪೈಪೋಟಿ (ಚಿತ್ರದುರ್ಗ ಲೋಕಸಭಾ ಕ್ಷೇತ್ರ) | Chitradurga
    • social-accounts-marketplaces.live_Lob ರಲ್ಲಿ ಅರಣ್ಯ ಇಲಾಖೆಗೆ ಸಾವಿರಾರು ಬಾಕಿ ಉಳಿಸಿಕೊಂಡ ಪ್ರತಿಷ್ಠಿತ ಕಂಪನಿಗಳು | Forest Dept
    • accounts-offer.org_Lob ರಲ್ಲಿ ವಿದ್ಯುತ್ ಕಳ್ಳತನ ಆರೋಪ: ಕುಮಾರಸ್ವಾಮಿಗೆ 68 ಸಾವಿರ ದಂಡ | HD Kumaraswamy
    Latest Kannada News

    ಚೀನಾ ನಂಬಿ ಕೆಟ್ಟ ಪಾಪಿ ಪಾಕಿಸ್ತಾನ..!

    ಮೇ 9, 2025

    ವಿಮಾನ ಹತ್ತಲು ಮೂರು ಗಂಟೆ ಮೊದಲು ಹೋಗಿ

    ಮೇ 9, 2025

    ಪೊಲೀಸರೇ ದರೋಡೆ ಮಾಡಿದ್ರಾ

    ಮೇ 9, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಚೀನಾ ನಂಬಿ ಕೆಟ್ಟ ಪಾಪಿ ಪಾಕಿಸ್ತಾನ ! #china #pm #pakistan #soldier #modi #viralvideo #news #worldnews
    Subscribe