ಬೆಂಗಳೂರು –
ಸಿಲಿಕಾನ್ ಸಿಟಿ ಬೆಂಗಳೂರಿಗೆ ಅನತಿ ದೂರದ ಚಿಕ್ಕಬಳ್ಳಾಪುರದ ಆವಲಗುರ್ಕಿಯಲ್ಲಿ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದ ಈಶ ಪ್ರತಿಷ್ಠಾನ ನಿರ್ಮಿಸಿರುವ ಭವ್ಯವಾದ “ಆದಿಯೋಗಿ’ ಪ್ರತಿಮೆ ಲೋಕಾರ್ಪಣೆಯಾಗುತ್ತಿದೆ.
ಈ ಅದ್ದೂರಿ ಸಮಾರಂಭವನ್ನು ಉಪ ರಾಷ್ಟ್ರಪತಿ ಉದ್ಘಾಟಿಸಬೇಕಿತ್ತು.ಆದರೆ, ಕೊನೆಯ ಕ್ಷಣದಲ್ಲಿ ಅವರು ಈ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ .ಇದು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಉಪ ರಾಷ್ಟ್ರಪತಿ ಕಾರ್ಯಕ್ರಮಕ್ಕೆ ಯಾಕೆ ಬರುತ್ತಿಲ್ಲ ಎನ್ನುವುದನ್ನು ಹೇಳುತ್ತೇವೆ.
ಚಿಕ್ಕಬಳ್ಳಾಪುರ ಸಮೀಪದಲ್ಲಿ ಕೊಯ ಮತ್ತೂರಿನ ಆದಿಯೋಗಿಯನ್ನೇ ಹೋಲುವ 112 ಅಡಿಗಳ ಆದಿಯೋಗಿ ಮೂರ್ತಿ ಉದ್ಘಾಟನೆಗೆ ಸನ್ನದ್ಧವಾಗಿದೆ. ಈಗಾಗಲೇ ಯೋಗಲಿಂಗೇಶ್ವರ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆದಿದೆ. ಜಗ್ಗಿ ವಾಸುದೇವ್ ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದವರು ಹೀಗಾಗಿ ತಮ್ಮ ಪೂರ್ವಿಕರ ಊರಿನ ಸಮೀಪದಲ್ಲಿ ಮಹತ್ವಾಕಾಂಕ್ಷೆಯ ಆದಿಯೋಗಿ,ಯೋಗ ಲಿಂಗೇಶ್ವರ ಮತ್ತು ಆದಿನಾಗನನ್ನು ಪ್ರತಿಷ್ಟಾಪಿಸಿದ್ದು, ಅಂತರಾಷ್ಟ್ರೀಯ ಯೋಗ ಮತ್ತು ಧ್ಯಾನ ಕೇಂದ್ರ ನಿರ್ಮಿಸುತ್ತಿದ್ದಾರೆ.ಇದಕ್ಕಾಗಿ ರೈತರಿಂದ ನೂರಾರು ಎಕರೆ ಭೂಮಿ ಖರೀದಿಸಿದ್ದಾರೆ.
ಕೊಯಮತ್ತೂರು ಸಮೀಪದ ಈಶ ಪ್ರತಿಷ್ಠಾನದ ಆಶ್ರಮ ಕೆಲವು ವಿವಾದಗಳಿಂದಾಗಿ ಸರ್ಕಾರದ ಕೆಂಗಣ್ಣಿಗೆ ಕಾರಣವಾಗಿದೆ. ಹೀಗಾಗಿ ವಿವಾದಗಳಿಂದ ದೂರ ಉಳಿಯಲು ಬಯಸಿರುವ ಜಗ್ಗಿ ವಾಸುದೇವ್ ಚಿಕ್ಕಬಳ್ಳಾಪುರ ಸಮೀಪದಲ್ಲಿ ಅಂತರಾಷ್ಟ್ರೀಯ ಕೇಂದ್ರ ನಿರ್ಮಿಸುತ್ತಿದ್ದಾರೆ.ಇದು ರಾಜಧಾನಿ ಬೆಂಗಳೂರಿನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದೆ ಅಲ್ಲದೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಸನಿಹದಲ್ಲೇ ಇದೆ.ಹೀಗಾಗಿ ಮಹತ್ವಾಕಾಂಕ್ಷೆಯೊಂದಿಗೆ ಈ ಕೇಂದ್ರ ನಿರ್ಮಿಸುತ್ತಿದ್ದಾರೆ. ಆದರೆ ಇದು ಕೂಡ ವಿವಾದದ ಸುಳಿಗೆ ಸಿಲುಕಿದೆ ಸರ್ಕಾರದ ನೆರವಿನ ಬಗ್ಗೆ ಅಪಸ್ವರ ಕೇಳಿಬಂದಿದೆ.
ಇನ್ನೂ ಈ ಕೇಂದ್ರ ಸುಪ್ರಸಿದ್ಧ ಗಿರಿಧಾಮ ನಂದಿ ಬೆಟ್ಟದ ಸಮೀಪದಲ್ಲಿ ಬರುತ್ತಿದೆ ಈ ಕೇಂದ್ರ ನಿರ್ಮಾಣಕ್ಕಾಗಿ ಕೆಲ ನಿಯಮ ಉಲ್ಲಂಘಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ನಂದಿ ಗಿರಿಧಾಮದ ಬೆಟ್ಟ ಸೇರಿದಂತೆ ನರಸಿಂಗ ದೇವರ ಬೆಟ್ಟಗಳ ಸಾಲುಗಳು ಈ ಭಾಗದ ಜಲ ಮೂಲಗಳಾಗಿದೆ.ಈ ಪ್ರದೇಶ ನರಸಿಂಹ ದೇವರ ವಲಯಕ್ಕೆ ಸೇರಿವೆ. ಈ ಬೆಟ್ಟಗಳ ಸಾಲಿನಲ್ಲಿ ಔಷಧ ಸಸ್ಯಗಳು ದಟ್ಟವಾಗಿವೆ. ಸಾಲು ಬೆಟ್ಟಗಳ ಮಧ್ಯಭಾಗದಲ್ಲಿ ಸೇರಿದ ಇಶಾ ಪ್ರತಿಷ್ಠಾನಕ್ಕೆ ಅರಣ್ಯ ಸೇರಿ ನಾನಾ ಕಾಯಿದೆಗಳನ್ನು ಉಲ್ಲಂಘಿಸಿ ವಾಣಿಜ್ಯ ಉದೇಶಕ್ಕಾಗಿ ಸರಕಾರಿ ಭೂಮಿ ಮಂಜೂರು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ
ಯೋಗ ಕೇಂದ್ರ ನಿರ್ಮಾಣವಾಗುತ್ತಿರುವ ಇಡೀ
ಪ್ರದೇಶವನ್ನು ಗ್ರೀನ್ ಬೆಲ್ಟ್ ಎಂದು ಘೋಷಣೆ ಮಾಡಲಾಗಿದ್ದು, ವಾಣಿಜ್ಯ ಚಟುವಟಿಕೆಗೆ ಅವಕಾಶವಿಲ್ಲ. ಆದರೂ ಸರಕಾರದ ಎ-ಖರಾಬು ಮತ್ತು ಬಿ-ಖರಾಬು ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವುದಕ್ಕಾಗಿ ಜಿಲ್ಲಾಡಳಿತ ಹಸ್ತಾಂತರ ಮಾಡಿದೆ. ಇಲ್ಲಿ ಇಶಾ ಪ್ರತಿಷ್ಠಾನ ಕಾಮಗಾರಿ ಕೈಗೊಂಡಿದ್ದು, ಅದರಿಂದ ಸುತ್ತಮುತ್ತಲಿನ ಪರಿಸರ ಹಾಳಾಗಲಿದೆ ಎಂದು ಆರೋಪಿಸಿ ಹೈಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಲಾಗಿದೆ.
ಈ ರೀತಿಯಲ್ಲಿ ವಿವಾದಕ್ಕೆ ಲಪಕಾರಣವಾದ ಕೇಂದ್ರವನ್ನು ಸಂವಿಧಾನ ರಕ್ಷಣೆಯ ಉನ್ನತ ಹುದ್ದೆಯಲ್ಲಿರುವ ತಾವು ಉದ್ಘಾಟಿಸುವುದು ಸರಿಯಲ್ಲ ಎಂದು ಭಾವಿಸಿದ ಉಪ ರಾಷ್ಟ್ರಪತಿ ಸಮಾರಂಭದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯನ್ನು ಜಗ್ಗಿ ವಾಸುದೇವ್ ಅವರ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಸದ್ಗುರು Jaggi Vasudevಗೆ ತೀವ್ರ ಹಿನ್ನಡೆ?
Previous Articleಅಣ್ಣಾಮಲೈ ಗೆ ಭಾರಿ ಭದ್ರತೆ
Next Article ರಾಜ್ಯದಲ್ಲಿ BJPಗೆ ಬಹುಮತ- ಸಮೀಕ್ಷಾ ವರದಿ