ಬೆಂಗಳೂರು,ಜೂ.12-ಹಲ್ಲೆ ಸಂಬಂಧಿಸಿದ ದೂರಿನ ಹಿನ್ನೆಲೆಯಲ್ಲಿ ಹಿರಿಯ ನಟ ಜೈ ಜಗದೀಶ್ ಇಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.
ನಟ ಜೈಜಗದೀಶ್, ಟೋಲ್ ಬಳಿ ವ್ಯಕ್ತಿಗೆ ಕೈಕಚ್ಚಿದ್ದ ಆರೋಪ ದಾಖಲಾಗಿದ್ದು, ಈ ಸಂಬಂಧ ವಿಚಾರಣೆಗೆಹಾಜರಾಗುವಂತೆ ಪೊಲೀಸರು ಸೂಚನೆ ನೀಡಿದ್ದರು.
ಅದರಂತೆ ನಟ ಜೈಜಗದೀಶ್ ಇಂದು ಬೆಳ್ಳೂರು ಪೊಲೀಸ್ ಠಾಣೆಗೆ ಹಾಜರಾಗಿ ದೂರಿನ ಸಂಬಂಧಿಸಿದ ಮಾಹಿತಿಯನ್ನು ನೀಡಿದ್ದಾರೆ.
ಕಳೆದ, ಜೂನ್ 5ರಂದು ಬೆಳ್ಳೂರು ಕ್ರಾಸ್ ಟೋಲ್ ಬಳಿ ತಮ್ಮ ಕಾರಿನ ಮೇಲೆ ಬಾಟಲಿ ಎಸೆದಿದ್ದಾರೆಂದು ನಟ ಮತ್ತು ವ್ಯಕ್ತಿಯ ನಡುವೆ ಗಲಾಟೆ ಶುರುವಾಗಿತ್ತು.
ಬಸ್‌ನಿಂದ ಇಳಿದು ಹೋಗುವಾಗ ವ್ಯಕ್ತಿಯ ಮೇಲೆ ಹಲ್ಲೆ ನಟ ಜೈ ಜಗದೀಶ್ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ. ವ್ಯಕ್ತಿ ದೂರಿನ ಮೇರೆಗೆ ಜೈ ಜಗದೀಶ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ.