ಬೆಂಗಳೂರು,ಆ.18- ಬೈಕ್ ಮಾಲೀಕ ಮಾಡಿದ ಎಡವಟ್ಟಿನಿಂದಾಗಿ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಪ್ರಕರಣ ಎದುರಿಸುವಂತಾಯಿಗಿದ್ದು ಕೊನೆಗೂ ನಗರದ ಸಂಚಾರ ಪೊಲೀಸರ ನಿಖರ ತನಿಖೆಯಿಂದ ನಕಲಿ ನಂಬರ್ ಪ್ಲೇಟ್ ಅವಾಂತರದಿಂದ ನಡೆದಿರುವ ಸತ್ಯಾಂಶ ಹೊರಬಂದಿದೆ.
ಕಳೆದ ಮೇ ತಿಂಗಳಲ್ಲಿ ಶಾಲಾ ಬಸ್ ಮತ್ತು ಬೈಕ್ ನಡುವೆ ಬನಶಂಕರಿ ಠಾಣಾ ವ್ಯಾಪ್ತಿಯ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಅಪಘಾತ ಸಂಭವಿಸಿ ಬಾಲಕಿಯೊಬ್ಬಳು ಮೃತಪಟ್ಟಿದ್ದಳು.
ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ವೇಳೆ ಬೈಕ್ ಮಾಲೀಕನ ಮಹಾ ಎಡವಟ್ಟು ಬಯಲಾಗಿದೆ. ಅಸಲಿಗೆ ಬೈಕ್ ಮಾಲೀಕ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಬೈಕ್ ಓಡಿಸುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಸ್ಪ್ಲೆಂಡರ್ ಪ್ಲಸ್ ಬೈಕ್ಗೆ ಕರ್ನಾಟಕ ನೋಂದಣಿ ನಂಬರ್ ಪ್ಲೇಟ್ ಬಳಸಿ ರೈಡಿಂಗ್ ಮಾಡುತ್ತಿದ್ದ. ಅಸಲಿಗೆ ಮಾಲೀಕ ಆ ಬೈಕ್ ಅನ್ನು ಪೊಲೀಸರ ವಾಹನ ಹರಾಜಿನಲ್ಲಿ ಖರೀದಿ ಮಾಡಿದ್ದ.
ಮಾಲೀಕನ ಹೆಸರು ಅನಂತರಾಮು ಎಂದು. ಬೈಕ್ ಖರೀದಿ ಬಳಿಕ ಬೈಕ್ ದಾಖಲಾತಿಗಳನ್ನು ರೆಡಿ ಮಾಡಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದ. ಆತ ಖರೀದಿಸಿದ್ದು ಎಂಹೆಚ್ 31ಬಿ ಎಕ್ಸ್ 8023 ನೋಂದಣಿಯ ಬೈಕ್ ಆಗಿತ್ತು. ಆದರೆ, ಹೊರರಾಜ್ಯದ ಬೈಕ್ ಅನ್ನು ನಗರದಲ್ಲಿ ಓಡಿಸಿದರೆ ಟ್ರಾಫಿಕ್ ಪೊಲೀಸರು ಬೈಕ್ ಹಿಡಿಯಬಹುದು ಎಂದು ನಕಲಿ ನಂಬರ್ ಪ್ಲೇಟ್ ಬಳಕೆ ಮಾಡಿದ್ದ.
ಎಂಹೆಚ್ 31ಬಿ ಎಕ್ಸ್ 8023 ನಂಬರ್ ಪ್ಲೇಟ್ ತೆಗೆದು ಕೆಎ04 ಹೆಚ್ ಇ-5475 ನೋಂದಣಿಯ ನಂಬರ್ ಬಳಸಿ ಬೈಕ್ ಸವಾರಿ ಮಾಡುತ್ತಿದ್ದ. ದುರಾದೃಷ್ಟವಶಾತ್ ಮೇ ತಿಂಗಳಲ್ಲಿ ಈ ಬೈಕ್ನಿಂದ ಅಪಘಾತವಾಗಿತ್ತು. ಅಪಘಾತದಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಓರ್ವ ಬಾಲಕಿ ಮೃತಪಟ್ಟಿದ್ದಳು. ಈ ವೇಳೆ ಬೈಕ್ ನಂಬರ್ ಜಾಡು ಹಿಡಿದು ಮಾಲೀಕನನ್ನು ವಿಚಾರಣೆ ನಡೆಸಲಾಗಿತ್ತು. ಆದರೆ, ಅಪಘಾತಕ್ಕೂ ನನಗೂ ಸಂಬಂಧವಿಲ್ಲ ಎಂದಿದ್ದ.
ಇದೀಗ ಅಸಲಿ ಬೈಕ್ ಮಾಲೀಕ ಸಿಕ್ಕಿಬಿದ್ದಿದ್ದಾನೆ. ಸರಿಯಾದ ದಾಖಲಾತಿ ಇಲ್ಲದೆ ಮತ್ತು ನಕಲಿ ನಂಬರ್ ಪ್ಲೇಟ್ ಬಳಕೆಯಿಂದ ಎಲ್ಲರಿಗೂ ಸಂಕಷ್ಟ. ನಕಲಿ ನಂಬರ್ ಪ್ಲೇಟ್ ಬಳಸಿ ವಂಚನೆ ಹಿನ್ನಲೆಯಲ್ಲಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಮಾಲೀಕನ ವಿರುದ್ಧ ಕೇಸ್ ದಾಖಲಲಾಗಿದೆ. ಇದೇ ರೀತಿ ಕಳೆದ 2 ತಿಂಗಳಲ್ಲಿ 12 ನಕಲಿ ನಂಬರ್ ಪ್ಲೇಟ್ ಪ್ರಕರಣ ಪತ್ತೆಯಾಗಿದೆ. ಅದರಲ್ಲಿ ನಾಲ್ಕು ಪ್ರಕರಣಗಳು ಅಪಘಾತ ಎಸಗಿ ಸಿಕ್ಕಿಬಿದ್ದಿದ್ದಾರೆ.
Previous Articleಕಂಬ್ಳಿಹುಳ ಚಿತ್ರದ ಮೊದಲ ಹಾಡು ರಿಲೀಸ್
Next Article ಶೂಟಿಂಗ್ ವೇಳೆ ಅವಘಡ: ಬಾಹುಬಲಿ ನಟ ಆಸ್ಪತ್ರೆಗೆ ದಾಖಲು