ಬೆಂಗಳೂರು – ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಕೆಲವೇ ದಿನಗಳಷ್ಟೇ ಕಳೆದಿವೆ. ನೂತನ ಸರ್ಕಾರ ಆಡಳಿತ ಯಂತ್ರಕ್ಕೆ ಚುರುಕು ನೀಡುವ ದೃಷ್ಟಿಯಿಂದ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಅಧಿಕಾರಿಗಳ ವರ್ಗಾವಣೆ ಮೂಲಕ ಜಡ್ಡು ಗಟ್ಟಿದ ಆಡಳಿತ ವ್ಯವಸ್ಥೆಯನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುವುದು ಹೊಸದಾಗಿ ಆಯ್ಕೆಯಾದ ಎಲ್ಲ ಸರ್ಕಾರಗಳ ಮೊದಲ ಆದ್ಯತೆಯಾಗಿದೆ.
ನೂತನ ಸರ್ಕಾರದ ಮುಖ್ಯಸ್ಥರು ತಮಗಿಂತ ಹಿಂದಿದ್ದ ಸರ್ಕಾರದಲ್ಲಿ ಆಯಕಟ್ಟಿನ ಜಾಗದಲ್ಲಿದ್ದ ಅಧಿಕಾರಿಗಳನ್ನು ಬದಲಾಯಿಸಿ ತಮಗೆ ಸರಿಹೊಂದುವ ಹಾಗೂ ತಮ್ಮ ಆಡಳಿತ ವೈಖರಿಗೆ ಸ್ಪಂದಿಸುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿಕೊಳ್ಳುವುದು ರೂಢಿಗತವಾಗಿ ಬಂದಿರುವ ವ್ಯವಸ್ಥೆಯಾಗಿದೆ.
ಅದರಂತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೂಡ ಹಲವಾರು ವರ್ಗಾವಣೆಗಳನ್ನು ಮಾಡುತ್ತಿದೆ.
ಈ ವರ್ಗಾವಣೆ ಪ್ರಕ್ರಿಯೆ ಇದೀಗ ಸಚಿವರ ಮಟ್ಟದಲ್ಲಿ ಮತ್ತು ಕಾಂಗ್ರೆಸ್ ಶಾಸಕರ ವಲಯದಲ್ಲಿ ತೀವ್ರ ಅಸಮಾಧಾನ ಮತ್ತು ಬೇಸರಕ್ಕೆ ಕಾರಣವಾಗಿದೆ ಇವರೆಲ್ಲ ಈ ವಿಷಯವನ್ನು ಸೂಕ್ತ ವೇದಿಕೆಯಲ್ಲಿ ಪ್ರಸ್ತಾಪಿಸಲು ಸಿದ್ಧತೆ ನಡೆಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
ಇಂತಹ ಅಸಮಾಧಾನ ಮತ್ತು ಬೇಸರಕ್ಕೆ ಪ್ರಮುಖ ಕಾರಣ ಮುಖ್ಯಮಂತ್ರಿಯ ಸಿದ್ದರಾಮಯ್ಯ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್.
ಬೆಂಗಳೂರಿನ ಹೆಬ್ಬಾಳ ಕ್ಷೇತ್ರದ ಶಾಸಕರಾಗಿರುವ ಸಚಿವ ಭೈರತಿ ಸುರೇಶ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಂಬಿಕಸ್ಥ ಭಂಟರ ಬಗ್ಗೆ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಬೈರತಿ ಸುರೇಶ್ ಏನಾದರೂ ಹೇಳಿದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಂತೆ ಎಂಬ ಅಭಿಪ್ರಾಯವಿದೆ.
ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಯಾವುದೇ ವಾಕ್ಯವನ್ನು ಮಂತ್ರಿ ಬೈರತಿ ಸುರೇಶ್ ಮೀರುವುದಿಲ್ಲ.
ಇಂತಹ ಬಾಂಧವ್ಯ ಹೊಂದಿರುವ ಬೈರತಿ ಸುರೇಶ್ ಇದೀಗ ತಮ್ಮ ಇಲಾಖೆ ಮಾತ್ರವಲ್ಲದೆ ಹಲವು ಮಂತ್ರಿಗಳ ಖಾತೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮುಖ್ಯಮಂತ್ರಿ ಅವರ ಪುತ್ರ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ಮೂಲಕ ಬೈರತಿ ಸುರೇಶ್ ಅವರು ಹಲವು ಇಲಾಖೆಗಳ ಪ್ರಮುಖ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಎಂಬ ನೆಪ ಒಡ್ಡಿ ಕಂದಾಯ ಸಚಿವರ ಗಮನಕ್ಕೆ ಬಾರದೆ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ವರ್ಗಾಯಿಸಲಾಗಿದೆ ಅದೇ ರೀತಿ ಗೃಹ ಸಚಿವರ ಗಮನಕ್ಕೆ ತರದೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ ಜಲಸಂಪನ್ಮೂಲ ಇಂಧನ ಸಮಾಜ ಕಲ್ಯಾಣ ಅಬಕಾರಿ ಇಲಾಖೆಯ ಹಲವು ಅಧಿಕಾರಿಗಳು ವರ್ಗಾವಣೆಯಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಮಂತ್ರಿಗಳು ತೀವ್ರ ಅಸಮಾಧಾನ ಹೊಂದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಚಿವರಾದ ಜಿ ಪರಮೇಶ್ವರ್ ಎಂ ಬಿ ಪಾಟೀಲ್ ಕೃಷ್ಣ ಬೈರೇಗೌಡ ಅವರು ಈ ವಿಷಯವನ್ನು ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಬೇಕು ಇಲಾಖೆಯ ಮಂತ್ರಿಗಳು ಎಂದು ನಮ್ಮ ಪಕ್ಷದ ಶಾಸಕರು ಕೆಲವು ಅಧಿಕಾರಿಗಳ ವರ್ಗಾವಣೆಗೆ ನಮಗೆ ಮನವಿ ಮಾಡಿದ್ದಾರೆ ಇದನ್ನು ಪರಿಶೀಲಿಸುವ ಮೊದಲೇ ನಮ್ಮ ಗಮನಕ್ಕೂ ಬಾರದೆ ಕೆಲವು ವರ್ಗಾವಣೆಗಳಾಗಿವೆ ಇವೆಲ್ಲವೂ ಭಾರತಿ ಸುರೇಶ್ ಅವರೇ ಯತೀಂದ್ರ ಸಿದ್ದರಾಮಯ್ಯ ಅವರನ್ನು ಬಳಸಿಕೊಂಡು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ ಹೀಗಾಗಿ ಸದ್ಯದಲ್ಲೇ ನಡೆಯುವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಚರ್ಚೆಗೆ ಬರುವ ಸಾಧ್ಯತೆ ಇದ್ದು ಕುತೂಹಲ ಮೂಡಿಸಿದೆ.
ಮಂತ್ರಿ ಬೈರತಿ ಸುರೇಶ್ ಸುದ್ದಿಯಲ್ಲಿದ್ದಾರೆ ಯಾಕೆ ಗೊತ್ತಾ?
Previous ArticleCongress ಆಡಳಿತದಲ್ಲಿ ಜೇಬುಗಳ್ಳರು
Next Article ಅವೀವಾ ಬಿದ್ದಪಗೆ ಇದು ಎರಡನೇ ಮದುವೆ!