ಬೆಂಗಳೂರು, ನ.9- ಕೇರಳ (Kerala) ಗಡಿಯ ವಯನಾಡು ಸಮೀಪದಲ್ಲಿ ಪೊಲೀಸ್ ಹಾಗೂ ನಕ್ಸಲರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ನಕ್ಸಲ್ ತಂಡದಲ್ಲಿದ್ದ ಶೃಂಗೇರಿಯ ಮಹಿಳೆ ಸೇರಿ ಇಬ್ಬರು ನಕ್ಸಲರನ್ನು ಪೊಲೀಸರು ಬಂಧಿಸಿದ್ದಾರೆ.
ವಯನಾಡು ಸೇರಿ ಹಲವೆಡೆ ನಕ್ಸಲರು ಅಡಗಿರುವ ಕುರಿತು ಕೇರಳ ಪೊಲೀಸ್‌ನ ವಿಶೇಷ ಕಾರ್ಯಾಚರಣೆ ತಂಡವು (ಎಸ್ ಒಜಿ) ತಂಡವು ಹೆಚ್ಚಿನ ನಿಗಾ ಇರಿಸುತ್ತಿದೆ. ಹಾಗಾಗಿ, ಕರ್ನಾಟಕ-ಕೇರಳ ಗಡಿಯಲ್ಲಿ ಆಗಾಗ ಕಾರ್ಯಾಚರಣೆಗಳು ನಡೆಯುತ್ತಲೇ ಇರುತ್ತವೆ.
ವಯನಾಡು ಜಿಲ್ಲೆಯ ತಲಪ್ಪುಳ ವ್ಯಾಪ್ತಿಯ ಮನೆಯೊಂದರಲ್ಲಿ ನಕ್ಸಲರು ಊಟಕ್ಕೆ ಬರಲಿದ್ದಾರೆ ಎಂಬ ಮಾಹಿತಿ ಆಧರಿಸಿ ಪೊಲೀಸರು ಹೊಂಚು ಹಾಕಿ ಕುಳಿತಿದ್ದರು.ನಿಗಧಿಯಂತೆ ನಕ್ಸಲರು ಮನೆಯೊಂದಕ್ಕೆ ಬಂದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಆಗ ನಕ್ಸಲರು ಕೂಡ ಗುಂಡಿನ ದಾಳಿ ನಡೆದಿದೆ. ಇದು ಪೊಲೀಸರು ಹಾಗೂ ನಕ್ಸಲರ ಮಧ್ಯೆ ಗುಂಡಿನ ಚಕಮಕಿಗೆ ಕಾರಣವಾಗಿದೆ. ಆದರೂ, ಮುನ್ನಡೆ ಸಾಧಿಸಿದ ಪೊಲೀಸರು ಶೃಂಗೇರಿ ಮೂಲದ ಶ್ರೀಮತಿ ಅಲಿಯಾಸ್ ಉನ್ನಿಮಾಯ ಹಾಗೂ ತಿರುವೇಂಡಿಗಂನ ಚಂದ್ರುನನ್ನು ಬಂಧಿಸಿದ್ದಾರೆ. ಮೂವರು ನಕ್ಸಲರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತರನ್ನು ಪೊಲೀಸ್ ಕ್ಯಾಂಪ್‌ನಲ್ಲಿ ವಿಚಾರಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಂಧಿತ ಇಬ್ಬರು ನಕ್ಸಲರು ಕೂಡ ಕರ್ನಾಟಕ ಹಾಗೂ ಕೇರಳದಲ್ಲಿ ಪೊಲೀಸರ ವಾಂಟೆಡ್ ಲಿಸ್ಟ್‌ನಲ್ಲಿದ್ದಾರೆ. ಇಬ್ಬರ ವಿರುದ್ಧವೂ ಹತ್ತಾರು ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.
ಕುದುರೆ ಮುಖ ಹೋರಾಟದ ಸಮಯದಲ್ಲಿ ನಕ್ಸಲ್ ಸಿದ್ಧಾಂತದ ಬಗ್ಗೆ ಆಕರ್ಷಿತರಾಗಿ ಮನೆಯಿಂದ ಓಡಿಹೋದ ಶೃಂಗೇರಿ ಮೂಲದ ಶ್ರೀಮತಿಯು 2007ರಲ್ಲಿ ನಕ್ಸಲರ ತಂಡವನ್ನು ಸೇರಿದ್ದರು. ಈಕೆಯ ವಿರುದ್ಧ ಸುಮಾರು 15 ಪ್ರಕರಣಗಳು ದಾಖಲಾಗಿವೆ. ಲೋಕಸಭೆ ಚುನಾವಣೆ ಸಂದರ್ಭ ಸೇರಿ ಹಲವು ಬಾರಿ ನಡೆದ ಮಾವೋವಾದಿಗಳ ದಾಳಿಗಳಲ್ಲಿ ಈಕೆ ಭಾಗಿಯಾಗಿದ್ದಳು ಎಂದು ತಿಳಿದುಬಂದಿದೆ. ಕಳೆದ ತಿಂಗಳು ಕೂಡ ಹಲವು ನಕ್ಸಲರು ವಯನಾಡು ಜಿಲ್ಲೆಯಲ್ಲಿರುವ ರೆಸಾರ್ಟ್ ಒಂದಕ್ಕೆ ನುಗ್ಗಿ, ಅಲ್ಲಿನ ಸಿಬ್ಬಂದಿಯ ಮೊಬೈಲ್ ಕಸಿದುಕೊಂಡು ಕೆಲ ಪತ್ರಕರ್ತರಿಗೆ ಬೆದರಿಕೆಯೊಡ್ಡಿದ್ದರು.
1 ಟಿಪ್ಪಣಿ
i-tec.ru https://www.multimedijnyj-integrator.ru .