ಹೈದರಾಬಾದ್ – ಬಹಳ ದಿನಗಳಿಂದ ಜನಪ್ರಿಯ ತಾರೆ ರಶ್ಮಿಕಾ ಮಂದಣ್ಣ (Rashmika Mandanna) ಬಗ್ಗೆ ಒಂದು ಸುದ್ದಿ ಕೇಳಿ ಬರುತ್ತಿದೆ. ಅದೇನೆಂದರೆ ಆಕೆ ಮತ್ತು ತೆಲುಗಿನ ಜನಪ್ರಿಯ ನಟ ವಿಜಯ್ ದೇವರಕೊಂಡ ಅವರು ಜೋಡಿಯಾಗಿಬಿಟ್ಟಿದ್ದಾರೆ, ಮತ್ತು ಅವರು ಹೀಗೆ ತಮ್ಮ ಬಾಳಹಾದಿಯನ್ನೂ ಜೊತೆಯಾಗಿಯೇ ಕಂಡುಕೊಳ್ಳುತ್ತಾರೆ ಎಂದೆಲ್ಲ.
ಇತ್ತೀಚೆಗೆ ರಶ್ಮಿಕಾ ದುಬೈಗೆ ಹಾರಿ ಅಲ್ಲಿ ವಿಜಯ್ (Vijay Devarakonda) ಅವರ ಕುಟುಂಬದೊಂದಿಗೆ ಸಮಯ ಕಳೆದಿದ್ದರು ಎನ್ನುವುದೂ ಸುದ್ದಿಯಾಗಿತ್ತು. ಆದರೆ ಈ ಆಕರ್ಷಕ ನಟಿ ತೆಲುಗಿನ ಇನ್ನೊಬ್ಬ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಜೊತೆ ಇತ್ತೀಚೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಮತ್ತು ಅದು ಬರಿ ಸುಮ್ಮನೆ ಅಲ್ಲ, ಅವರಿಬ್ಬರ ಮಧ್ಯೆ ಏನೋ ನಡೆಯುತ್ತಿದ್ದೆ ಎನ್ನುವಷ್ಟು ಅನುಮಾನ ಹುಟ್ಟಿಸಿದೆ ಎಂದು ವರದಿಯಾಗಿದೆ.
ಇದರಿಂದ ರಶ್ಮಿಕಾ ಅವರ ಫ್ಯಾನ್ಸ್ ಬಹಳ ಕುತೂಹಲ ವ್ಯಕ್ತಪಡಿಸಿದ್ದಾರೆ ಮತ್ತು ರಶ್ಮಿಕಾ ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ ಎಂದೂ ಹೇಳಲಾಗಿದೆ. ಆದರೆ ಇಂದಿನವರೆಗೆ ರಶ್ಮಿಕಾ ಮಾತ್ರ ವಿಜಯ್ ದೇವರಕೊಂಡ ಬರಿ ಒಬ್ಬ ಆತ್ಮೀಯ ಸ್ನೇಹಿತ ಮಾತ್ರ ಎಂದು ಹೇಳಿಕೊಂಡಿರುವ ಹಿನ್ನೆಲೆಯಲ್ಲಿ ರಶ್ಮಿಕಾ ಪ್ರೀತಿ ಇನ್ನೊಂದು ಕಡೆ ವಾಲಿರಬಹುದು ಮತ್ತು ಆ ವ್ಯಕ್ತಿ ಸಾಯಿ ಶ್ರೀನಿವಾಸ್ ಆಗಿರಲೂ ಬಹುದು ಎಂದು ರಶ್ಮಿಕಾ ಅವರ ಫ್ಯಾನ್ಸ್ ಯೋಚಿಸುವಂತೆ ಮಾಡಿದೆ.
1 ಟಿಪ್ಪಣಿ
Thanks for finally writing about > ರಶ್ಮಿಕಾ – ವಿಜಯ್
ದೇವರಕೊಂಡ ಇನ್ನು ದೂರ ದೂರ?
| Rashmika Mandanna | Vijay Devarakonda – Vartha Chakra < Loved it!