ಬೆಂಗಳೂರು: ಜನತಾ ಜಲಧಾರೆ ಯಶಸ್ಸಿನಿಂದ ಪುಟಿದೇಳುತ್ತಿರುವ ಜೆಡಿಎಸ್ ಇದೀಗ ವಿಧಾನಸಭೆ ಚುನಾವಣೆಗೆ ಸಜ್ಜುಗೊಳ್ಳುವ ದೃಷ್ಟಿಯಿಂದ ‘ಪಂಚರತ್ನ ಯಾತ್ರೆ ಆರಂಭಿಸಲಿದೆ.
ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಂಚರತ್ನ ಕಾರ್ಯಕ್ರಮಗಳನ್ನು ರೂಪಿಸಿದೆ.
ಈ ಕಾರ್ಯಕ್ರಮ’ ಗಳ ಪ್ರಚಾರಕ್ಕೆ ರಾಜ್ಯಾದ್ಯಂತ 123 ಎಲ್ ಇಡಿ ವಾಹನಗಳು ಸಂಚಾರ ಮಾಡಲಿವೆ. ಇದಕ್ಕಾಗಿ 123 ಎಲ್ ಇಡಿ ವಾಹನಗಳನ್ನು ಖರೀದಿ ಮಾಡಲಾಗಿದ್ದು ಅವುಗಳನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಯಶವಂತಪುರದಲ್ಲಿರುವ ಅರವಿಂದ ಮೋಟಾರ್ಸ್ ಕಂಪನಿಯ ಅಧಿಕಾರಿಗಳು ಇಂದು ಹಸ್ತಾಂತರ ಮಾಡಿದರು.
ಈ ವೇಳೆ ಪಂಚರತ್ನ ಯೋಜನೆಗಳ ಪ್ರಚಾರಕ್ಕೆ ಖರೀದಿಸಿರುವ 123 ಟಾಟಾ ಏಸ್ ವಾಹನಗಳಿಗೆ ಯಶವಂತಪುರದ ಬಳಿ ಕುಮಾರಸ್ವಾಮಿ ಅವರು ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು,2023 ರ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯಕ್ರಮಗಳು ಹಾಗೂ ಪಂಚರತ್ನ ಯೋಜನೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ 123 ವಾಹನಗಳನ್ನು ಖರೀದಿ ಮಾಡಿದ್ದೇವೆ ಎಂದು ಹೇಳಿದರು.
ಆರೋಗ್ಯ, ಕೃಷಿ, ನೀರಾವರಿ, ಉದ್ಯೋಗ ಹಾಗೂ ಮಹಿಳಾ – ಯುವ ಸಬಲೀಕರಣ; ಇವೇ ಪಂಚರತ್ನ ಕಾರ್ಯಕ್ರಮಗಳು. ಎಲ್ ಇಡಿ ವಾಹನಗಳ ಮೂಲಕ ಈ ಐದು ಕಾರ್ಯಕ್ರಮಗಳ ಮಾಹಿತಿಯನ್ನು ಜನತೆಗೆ ಕೊಡಲಾಗುವುದು ಎಂದು ಎಂದು ತಿಳಿಸಿದರು.
Previous ArticleDGP ಬೆವರಿಳಿಸಿದ ಸಿಎಂ..
Next Article ಅಪ್ಪಾಜಿ ಕ್ಯಾಂಟೀನ್’ನಲ್ಲಿ ದೇವೇಗೌಡ Birthday