ಬೆಂಗಳೂರು, ಸೆ.7 – ತೆಲುಗು ಸಿನಿಮಾದ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ (Pushpa) ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ ಸಿನಿಮಾ.
ರಕ್ತ ಚಂದನ ಕಳ್ಳ ಸಾಗಣೆಯ ಸುತ್ತ ಹೆಣೆಯಲಾದ ಈ ಸಿನಿಮಾದ ಕಥಾನಕ ಹೆಜ್ಜೆ ಹೆಜ್ಜೆಗೂ ರೋಚಕ,ರೋಮಾಂಚಕ. ಈ ಸಿನಿಮಾದ ಕಥಾ ನಾಯಕ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಕಣ್ಣು ತಪ್ಪಿಸಿ ಹೊಸ ಹೊಸ ವಿಧಾನಗಳ ಮೂಲಕ ರಕ್ತ ಚಂದನ ಕಳ್ಳಸಾಗಣೆ ಮಾಡುವುದರಲ್ಲಿ ಎತ್ತಿದ ಕೈ.
ಈ ಸಿನಿಮಾದ ಪ್ರೇರಣೆಯೊಂದಿಗೆ ಚಾಮರಾಜನಗರದಲ್ಲಿ ಐವರು ರಕ್ತ ಚಂದನ ಕಳ್ಳಸಾಗಣೆ ಮಾಡಲು ಹೋಗಿ ಪೊಲೀಸರ ಅತಿಥಿಗಳಾಗಿದ್ದಾರೆ.
ಹೂಕೋಸುಗಳ ಮಧ್ಯದಲ್ಲಿ ರಕ್ತ ಚಂದನ ತುಂಬಿಕೊಂಡು ಸಾಗಿಸುತ್ತಿದ್ದ ಐವರನ್ನು ಚಾಮರಾಜನಗರ-ಗುಂಡ್ಲುಪೇಟೆ ರಸ್ತೆಯ ಲಕ್ಕೂರು ಬಳಿ ಕಾರ್ಯಾಚರಣೆ ಕೈಗೊಂಡು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ಮೂಲದ ರವಿ (47), ಚಾಮರಾಜನಗರದ ಸರಗೂರು ಮೋಳೆಯ ಎಸ್ ಎಂ ಗೋವಿಂದರಾಜು (43), ಆನಂದ್ (40), ಸಿ ಎಸ್ ಆಸ್ಕರ್ ಪಾಷ (63), ಮಹೇಂದ್ರ (32) ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳು ಮಹೇಂದ್ರ ಬೊಲೆರೋ ಪಿಕಪ್ ವಾಹನದಲ್ಲಿ ಮೇಲೆ ಹೂಕೋಸುಗಳನ್ನು ತುಂಬಿಕೊಂಡು ಅವುಗಳ ಮಧ್ಯೆ ಅಕ್ರಮವಾಗಿ ರಕ್ತ ಚಂದನ ಮರದ ತುಂಡುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಬಂಡೀಪುರದ ಅರಣ್ಯ ಇಲಾಖೆಯ ಮೂರು ತಂಡಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಸಂಬಂಧ ಗುಂಡ್ಲುಪೇಟೆ ಬಫರ್ ಜೇನ್ ವಲಯದಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರಿಂದ ಬೊಲೆರೊ ವಾಹನ ಸೇರಿದಂತೆ 50 ಕೆಜಿಯಷ್ಟು ರಕ್ತಚಂದನದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.


1 ಟಿಪ್ಪಣಿ
The ultimate escape into nonstop action and real rewards – https://zybipion.com , This is where broke becomes folklore .