Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2023
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮಹಿಳಾ ಮೀಸಲಾತಿಗೆ ಓಕೆ. ಅದರೆ ಈಗಲೇ ಜಾರಿಯಿಲ್ಲ ಯಾಕೆ..? (ಸುದ್ದಿ ವಿಶ್ಲೇಷಣೆ) | Women’s Reservation Bill
    ಬೆಂಗಳೂರು

    ಮಹಿಳಾ ಮೀಸಲಾತಿಗೆ ಓಕೆ. ಅದರೆ ಈಗಲೇ ಜಾರಿಯಿಲ್ಲ ಯಾಕೆ..? (ಸುದ್ದಿ ವಿಶ್ಲೇಷಣೆ) | Women’s Reservation Bill

    vartha chakraBy vartha chakraಸೆಪ್ಟೆಂಬರ್ 20, 2023ಯಾವುದೇ ಟಿಪ್ಪಣಿಗಳಿಲ್ಲ5 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಕಲ್ಯಾಣ ರಾಜ್ಯ ಪರಿಕಲ್ಪನೆಯ ಪ್ರಜಾತಂತ್ರ ವ್ಯವಸ್ಥೆಯನ್ನು ಹೊಂದಿರುವ ಭಾರತದ ಅತ್ಯಂತ ಪವಿತ್ರ ಗ್ರಂಥ ಸಂವಿಧಾನದಲ್ಲಿ ಎಲ್ಲ ವರ್ಗಗಳಿಗೆ ಸಮಾನ ಅವಕಾಶ ಪ್ರಾತಿನಿಧ್ಯ ನೀಡುವುದನ್ನು ಬಲವಾಗಿ ಒತ್ತಿ ಹೇಳಲಾಗಿದೆ.
    ಇಂತಹ ಪ್ರಾತಿನಿಧ್ಯ ನೀಡುವ ವೇಳೆ ತುಳಿತಕ್ಕೊಳಗಾದವರು ಶೋಷಿತರು ಮತ್ತು ಅವಕಾಶ ವಂಚಿತರಿಗೆ ಆದ್ಯತೆ ನೀಡಬೇಕು ಲಿಂಗ, ಜಾತಿ,ಮತ್ತು ವರ್ಗದ ಆಧಾರದಲ್ಲಿ ತಾರತಮ್ಯ ಮಾಡಬಾರದು ಎಂದು ಪ್ರತಿಪಾದಿಸಲಾಗಿದೆ ಇಂತಹ ಆಶಯವನ್ನು ಹೊಂದಿರುವ ಸಂವಿಧಾನ ಇಡೀ ಜಗತ್ತಿನಲ್ಲೇ ಅತ್ಯಂತ ದೊಡ್ಡ ಲಿಖಿತ ಸಂವಿಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
    ಈ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ನಲ್ಲಿ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಸಂವಿಧಾನದ ಮೂಲ ಉದ್ದೇಶವಾದ ಎಲ್ಲರಿಗೂ ಸಮಾನ ಅವಕಾಶ ಎಂಬ ಆಶಯವನ್ನು ಎತ್ತಿ ಹಿಡಿಯುವ ಉದ್ದೇಶದೊಂದಿಗೆ ಜನಸಂಖ್ಯೆಯಲ್ಲಿ ಸರಿ ಸುಮಾರು ಶೇಕಡ 50 ರಷ್ಟಿರುವ ಮಹಿಳೆಯರಿಗೆ ಶಾಸನಸಭೆಗಳಲ್ಲಿ ಪ್ರಾತಿನಿಧ್ಯ ನೀಡುವ ಮಹಿಳಾ ಮೀಸಲಾತಿ ವಿಧೇಯಕ ಜಾರಿಗೆ ತೀರ್ಮಾನಿಸಿದೆ.

    ಕೇಂದ್ರ ಸರ್ಕಾರದ ಈ ನಡೆ ಅತ್ಯಂತ ಅನಿವಾರ್ಯ ಹಾಗೂ ಅಗತ್ಯ ಎನಿಸಿದ ಕ್ರಾಂತಿಕಾರಿ ನಿರ್ಧಾರವಾಗಿದೆ. ಯಾಕೆ ಈ ವಿಷಯ ಕ್ರಾಂತಿಕಾರಿ ಎಂದರೆ, ಮಹಿಳಾ ಮೀಸಲಾತಿ ಎನ್ನುವ ವಿಷಯ ಇಂದು ನಿನ್ನಿಯದಲ್ಲ ಇದಕ್ಕೆ ದಶಕಗಳಷ್ಟು ಹಳೆಯದಾದ ಇತಿಹಾಸವಿದೆ ಶಾಸನಸಭೆಗಳು ಎಂದು ಕರೆಯಲಾಗುವ ದೇಶದ ಲೋಕಸಭೆ ರಾಜ್ಯಸಭೆ ರಾಜ್ಯಗಳ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮಹಿಳಾ ಮೀಸಲಾತಿ ನೀಡಬೇಕು ಎನ್ನುವುದು ಹಲವು ದಶಕಗಳ ಬೇಡಿಕೆ. ಈ ಬೇಡಿಕೆಗೆ ರೆಕ್ಕೆ ಪುಕ್ಕ ಬಂದು ಹಾರಾಟ ನಡೆಸಿದ್ದು,ಸಂಯುಕ್ತ ರಂಗ ಸರ್ಕಾರದ ಅವಧಿಯಲ್ಲಿ. ಆಗ ಪ್ರಧಾನಿಯಾಗಿದ್ದ ಕರ್ನಾಟಕದ ಮಣ್ಣಿನ ಮಗ ಎಂಬ ಖ್ಯಾತಿಯ ಎಚ್.ಡಿ. ದೇವೇಗೌಡ ಅವರು ವಹಿಸಿದ ವಿಶೇಷ ಕಾಳಜಿಯ ಪರಿಣಾಮ ಇದು ಮೂರ್ತ ಸ್ವರೂಪ ಪಡೆದುಕೊಂಡಿತು. ಇದಕ್ಕೂ ಮುನ್ನ ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಯಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಇಂತಹ ಮೀಸಲಾತಿ ಜಾರಿಗೆ ತರುವ ಮೂಲಕ ದೇಶದಲ್ಲಿ ವಿನೂತನ ಕ್ರಮ ಕೈಗೊಂಡ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
    ಇಂತಹ ದಾಖಲೆ ಮಾಡಿದ್ದ ದೇವೇಗೌಡರು ಪ್ರಧಾನವಾಗಿ ಮಹಿಳಾ ಮೀಸಲಾತಿ ವಿಧೇಯಕಕ್ಕೆ ವಿಶೇಷ ಕಾಳಜಿ ಹಾಗೂ ಆಸಕ್ತಿ ವಹಿಸಿದರು. ಹೀಗಾಗಿ ದೇವೇಗೌಡರ ಸಂಪುಟದಲ್ಲಿ ಕಾನೂನು ಮಂತ್ರಿಯಾಗಿದ್ದ ರಮಾಕಾಂತ್ ಕಲಾಪ್ ಅವರು 1996ರ ಸೆಪ್ಟೆಂಬರ್ 12ರಂದು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕವನ್ನು ಮಂಡಿಸಿದರು.

    ಆದರೆ ಅಂದು ಸಂಸತ್ತಿನಲ್ಲಿ ಈ ವಿಧೇಯಕಕ್ಕೆ ಆಡಳಿತ ರೂಎ ಸಂಯುಕ್ತರಂಗ ಮೈತ್ರಿಕೂಟದ ಅನೇಕ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು ಪರಿಣಾಮವಾಗಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಅಧ್ಯಯನಕ್ಕೆ ಒಪ್ಪಿಸುವ ತೀರ್ಮಾನ ಕೈಗೊಳ್ಳಲಾಯಿತು ಅದರಂತೆ 1996ರ ಸೆಪ್ಟೆಂಬರ್ 13 ರಂದು ಭಾರತ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿದ್ದ ಗೀತಾ ಮುಖರ್ಜಿ ನೇತೃತ್ವದಲ್ಲಿ 31 ಸದಸ್ಯರ ಮೂಲಕ ಜಂಟಿ ಸಂಸದೀಯ ಸಮಿತಿಯನ್ನು ರಚಿಸಲಾಯಿತು ಈ ಸಮಿತಿಗೆ ಬಿಜೆಪಿಯ ಸುಷ್ಮಾ ಸ್ವರಾಜ್ ಸುಮಿತ್ರ ಮಹಾಜನ್ ಕಾಂಗ್ರೆಸ್ ಜನತಾದಳದ ನಿತೀಶ್ ಕುಮಾರ್ ಸೇರಿದಂತೆ ಹಲವರು ಸದಸ್ಯರಾಗಿದ್ದರು.
    ಹಲವಾರು ಸಭೆ,ಚಿಂತನ,ಮಂಥನ ನಡೆಸಿದ ಈ ಸಮಿತಿ ಹಲವಾರು ಸುತ್ತಿನಲ್ಲಿ ಮಾತುಕತೆ ನಡೆಸಿ ಒಟ್ಟಾರೆಯಾಗಿ ಶಾಸನಸಭೆಗಳಲ್ಲಿ ಒಟ್ಟು ಸದಸ್ಯರ ಶೇಕಡಾ ಮೂರನೇ ಒಂದರಷ್ಟು ಸದಸ್ಯತ್ವವನ್ನು ಮಹಿಳೆಯರಿಗೆ ಮೀಸಲಿಡಬೇಕು ಎಂಬುವ ತೀರ್ಮಾನಗಳೊಳಗೊಂಡ ಶಿಫಾರಸನ್ನು 1996ರ ಡಿಸೆಂಬರ್ ನಲ್ಲಿ ಸಂಸತ್ತಿಗೆ ಒಪ್ಪಿಸಿತು.
    ಈ ಸಮಿತಿಯು ಮಹಿಳಾ ಮೀಸಲಾತಿ ಅದು ಜಾರಿಗೊಂಡ15 ವರ್ಷಗಳವರೆಗೆ ಇರಬೇಕು ಆನಂತರ ಜನಸಂಖ್ಯಾ ಲೆಕ್ಕಾಚಾರದ ಆಧಾರದಲ್ಲಿ ಸದಸ್ಯತ್ವದ ಸಂಖ್ಯೆಯ ಹೆಚ್ಚಳ ಅಥವಾ ಕಡಿಮೆ ಮಾಡುವ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿತು ಅಷ್ಟೇ ಅಲ್ಲ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಈಗ ನೀಡಲಾಗಿರುವ ಮೀಸಲಾತಿ ಅನುಗುಣವಾಗಿ ಈ ವರ್ಗದಲ್ಲೂ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂದು ಶಿಫಾರಸು ಮಾಡಿತು ಈ ಮೀಸಲಾತಿಗೆ ರೋಟೇಶನ್ ಪದ್ಧತಿ ಅಳವಡಿಸಬೇಕು ಎಂದು ಹೇಳಿತು.

    ಈ ವೇಳೆ ಸಮಿತಿಯ ಸದಸ್ಯರಾಗಿದ್ದ ಜನತಾದಳದ ನಿತೀಶ್ ಕುಮಾರ್ ಅವರು ಜಂಟಿ ಸಂಸದೀಯ ಸಮಿತಿಯ ಶಿಫಾರಸುಗಳಿಗೆ ಸದನದಲ್ಲೇ ವಿರೋಧ ವ್ಯಕ್ತಪಡಿಸಿದರು ಅವರು ಮಹಿಳಾ ಮೀಸಲಾತಿ ನೀಡುವ ವೇಳೆ ಇದರಲ್ಲಿ ಇತರೆ ಹಿಂದುಳಿದ ವರ್ಗಗಳ ಮಹಿಳೆಯರಿಗೂ ಮೀಸಲಾತಿ ನೀಡಬೇಕು ಎಂಬ ವಾದ ಮಂಡಿಸಿದರು. ಇಂಥ ವಿರೋಧದ ನಡುವೆ ಲೋಕಸಭೆ ಗೀತಾ ಮುಖರ್ಜಿ ಸಂಸದೀಯ ಸಮಿತಿಯ ವರದಿಗೆ ಅನುಮೋದನೆ ನೀಡಿತು.
    ಇದಾದ ನಂತರ 1998ರ ಜುಲೈ 13 ರಂದು ಆಂದಿನ ಕಾನೂನು ಮಂತ್ರಿಯಾಗಿದ್ದ ತಂಬಿದೊರೈ ಅವರು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಮಂಡನೆಗೆ ಮುಂದಾದರು ಮಸೂದೆಗೆ ರಾಷ್ಟ್ರೀಯ ಜನತಾದಳ, ಸಮಾಜವಾದಿ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿತು ಅದರಲ್ಲೂ ಸಮಾಜವಾದಿ ಪಕ್ಷದ ಸಂಸದರಾಗಿದ್ದ ಸುರೇಂದ್ರ ಪ್ರಸಾದ್ ಯಾದವ್ ಅವರು ಸಭಾಧ್ಯಕ್ಷರ ಪೀಠದಲ್ಲಿದ್ದ ಜಿಎಂಸಿ ಬಾಲ ಯೋಗಿ ಅವರ ಬಳಿಗೆ ತೆರಳಿ ಅವರ ಪೀಠದ ಮುಂದಿದ್ದ ಮಸೂದೆಯನ್ನು ಕಸಿದುಕೊಂಡು ಹರಿದು ಹಾಕಿದರು. ಅಷ್ಟೇ ಅಲ್ಲ ಮಂತ್ರಿ ತಂಬಿದೊರೈ ಅವರ ಬಳಿಯಿದ್ದ ಮಸೂದೆಯ ಪ್ರತಿಯನ್ನು ಕಸಿದುಕೊಂಡು ಹರಿದು ಹಾಕಿದರು ಈ ಮೂಲಕ ಎರಡನೇ ಬಾರಿಗೆ ಮಹಿಳಾ ಮೀಸಲಾತಿ ವಿಧಿಯೇಕ ಮಂಡನೆಗೆ ಲೋಕಸಭೆಯಲ್ಲಿ ಅಡ್ಡಿಯಾಯಿತು.

    ಮತ್ತೆ ಮೂರನೇ ಬಾರಿಗೆ ಈ ಮಸೂದೆ ಮಂಡನೆಯ ಪ್ರಯತ್ನ ಆರಂಭವಾಯಿತು. ಈ ವೇಳೆಗೆ ಶಾಸನಸಭೆಗಳ ಒಟ್ಟು ಸದಸ್ಯರ ಶೇಕಡ 3ನೇ ಒಂದರಷ್ಟು ಮಹಿಳಾ ಮೀಸಲಾತಿ ಎಂಬ ಅಂಶ ಮನದಟ್ಟಾಯಿತು ಅಂದರೆ ಒಟ್ಟಾರೆ ಸದಸ್ಯರ ಶೇಕಡ 33% ರಷ್ಟು ಮಹಿಳೆಯರಿಗೆ ಅವಕಾಶ ನೀಡಬೇಕು ಎಂಬ ತೀರ್ಮಾನ ದಲ್ಲಿ ಒಮ್ಮತ ಮೂಡಿತು ಆದರೆ ಮಹಿಳಾ ಮೀಸಲಾತಿ ಎಂದರೆ ಯಾವ ವರ್ಗದ ಮಹಿಳೆಯರಿಗೆ ಆದ್ಯತೆ ನೀಡಬೇಕು ಎಂಬ ವಿಷಯ ಚರ್ಚೆಯ ವಸ್ತುವಾಗಿ ಪರಿಣಮಿಸಿತು.
    ಟೀ ಕುಡಿತಾದ ಪರ ವಿರೋಧದ ಚರ್ಚೆಯ ನಡುವೆ ಮೂರನೇ ಬಾರಿ 2008ರ ಮೇ ತಿಂಗಳಲ್ಲಿ ಅಂದು ಕಾನೂನು ಮಂತ್ರಿ ಆಗಿದ್ದ ಹೆಚ್ ಆರ್ ಭಾರದ್ವಾಜ್ ಅವರು ಲೋಕಸಭೆಯಲ್ಲಿ ಮಸೂದೆ ಮಂಡನೆಗೆ ಮುಂದಾದರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಮಾಜವಾದಿ ಪಕ್ಷದ ಅಬು ಅಜ್ಮಿ ಅವರು ಕಾನೂನು ಮಂತ್ರಿ ಬಳಿ ಇದ್ದ ಮಸೂದೆಯ ಪ್ರತಿಯನ್ನು ಕಸಿದುಕೊಂಡು ಹರಿದು ಹಾಕುವ ಮೂಲಕ ಲೋಕಸಭೆಯಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಸಿದರು ಅಲ್ಲಿಗೆ ಮಹಿಳಾ ಮೀಸಲಾತಿ ವಿಧೇಯಕ ಹಾಗೂ ಸಂವಿಧಾನ ತಿದ್ದುಪಡಿ ಪ್ರಸ್ತಾವನೆ ಮತ್ತೊಮ್ಮೆ ನೆನೆಗುದಿಗೆ ಬಿದ್ದಿತು.
    ಇದಾದ ಬಳಿಕ ಯುಪಿಎ ಅಧ್ಯಕ್ಷ ಸೋನಿಯಾ ಗಾಂಧಿ ಅವರ ವಿಶೇಷ ಪ್ರಯತ್ನದ ಪರಿಣಾಮವಾಗಿ ಮತ್ತೊಮ್ಮೆ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಜೀವ ಬಂದಿತು. ಹಲವಾರು ಸುತ್ತಿನ ಚರ್ಚೆ ಸಂಧಾನ ಮಾತುಕತೆಗಳ ನಂತರ 2010ರ ಮಾರ್ಚ್ 9 ರಂದು ಸಂವಿಧಾನ ತಿದ್ದುಪಡಿ ಪ್ರಸ್ತಾಪ ಮತ್ತು ವಿಧೇಯಕ ರಾಜ್ಯಸಭೆಯಲ್ಲಿ ಮಂಡನೆ ಯಾಗಿ ಅನುಮೋದನೆ ಪಡೆದುಕೊಂಡಿತು ಆದರೆ ಲೋಕಸಭೆಯಲ್ಲಿ ಸಮಾಜವಾದಿ ಪಕ್ಷ ಸಂಯುಕ್ತ ಜನತಾದಳ ಬಿಎಸ್ಪಿ ಸೇರುವಂತೆ ಹಲವು ಪಕ್ಷಗಳ ವಿರೋಧದಿಂದಾಗಿ ಮಸೂದೆ ಹಾಗೂ ತಿದ್ದುಪಡಿ ಪ್ರಸ್ತಾಪ ಮಂಡನೆ ಆಗಲಿಲ್ಲ.

    ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃ ಎನ್ ಡಿ ಎ ಸರ್ಕಾರ ವಿಶೇಷ ಕಾಳಜಿ ವಹಿಸಿ ಮಸೂದೆಯನ್ನು ಸಿದ್ಧಪಡಿಸಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಪ್ರಸ್ತಾವನೆ ಅನುಮೋದನೆಗೊಳ್ಳಲು ಅಗತ್ಯವಿರುವ ಸಂಖ್ಯಾಬಲವನ್ನು ಬಿಜೆಪಿ ಹೊಂದಿರುವುದು ಹೊಂದಿರುವುದು ಗಮನಹ ಸಂಗತಿಯಾಗಿದೆ ಬಿಜೆಪಿಯ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಯಾವುದೇ ಅಪಸ್ವರ ಮತ್ತು ತಕರಾರುಗಳಿಗೆ ಅವಕಾಶವಿಲ್ಲದೆ ಒಪ್ಪಿಕೊಳ್ಳುತ್ತಿದ್ದಾರೆ ಹೀಗಾಗಿ ಈ ಬಾರಿ ಮಹಿಳಾ ಮೀಸಲಾತಿ ವಿಧೇಯಕ ಮತ್ತು ಸಂವಿಧಾನ ತಿದ್ದುಪಡಿ ಪ್ರಸ್ತಾಪ ಅನುಮೋದನೆಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಇದಕ್ಕೆ ಕಳಶವಿಟ್ಟಂತೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಯಾವುದೇ ರೀತಿಯ ಷರತ್ತು ಇಲ್ಲದೆ ಸಂವಿಧಾನ ತಿದ್ದುಪಡಿ ಪ್ರಸ್ತಾಪ ಮತ್ತು ವಿಧೇಯಕ್ಕೆ ಬೆಂಬಲ ಘೋಷಿಸಿದೆ.
    ಈ ಮೂಲಕ ಮಹಿಳೆಯರಿಗೆ ಸಮಾನ ಅವಕಾಶ ನೀಡಬೇಕು ಶಾಸನ ರಚನೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಕಾರ್ಯದಲ್ಲಿ ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಇರುವ ಮಹಿಳೆಯರನ್ನು ಒಳಗೊಳ್ಳಬೇಕು ಎನ್ನುವ ಆಶಯಕ್ಕೆ ಜಯ ಸಿಕ್ಕಂತಾಗಿರುವುದು ಎಲ್ಲಾ ನಾಗರೀಕರು ಹೆಮ್ಮೆ ಪಡುವ ಸಂಗತಿಯಾಗಿದೆ.

    ಮಹತ್ವದ ಸಂವಿಧಾನ ತಿದ್ದುಪಡಿ ಪ್ರಸ್ತಾಪ ಹಾಗೂ ವಿಧೇಯಕ ಜಾರಿಗೆ ಇಂತಹ ಎಲ್ಲಾ ಅನುಕೂಲಕರ ಅಂಶಗಳಿದ್ದರೂ‌ ಇದನ್ನು ತಕ್ಷಣಕ್ಕೆ ಅಂದರೆ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಜಾರಿ ತರುವ ಬದಲಿಗೆ ಲೋಕಸಭಾ ಕ್ಷೇತ್ರ ಪುನರ್ ವಿಂಗಡಣೆ ನಂತರ ಜಾರಿ ಎಂಬ ವಿಷಯ ಸೇರಿಸಿರುವುದು‌ ಒಪ್ಪತಕ್ಕ ಸಂಗತಿಯಲ್ಲ.
    ಮುಂದಿನ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ನಡೆದ ನಂತರವಷ್ಟೇ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ ಎಂದು ಮಸೂದೆಯಲ್ಲಿಯೇ ಹೇಳಿರುವುದರಿಂದ ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಕನಿಷ್ಠ 20 ವರ್ಷ ಬೇಕಾಗಬಹುದು.
    ಪ್ರತಿ 20 ವರ್ಷಕ್ಕೊಮ್ಮೆ ಲೋಕಸಭೆ ಮತ್ತು ವಿಧಾನಸಭೆಯ ಕ್ಷೇತ್ರಗಳ ಪುನರ್ ವಿಂಗಡಣೆ ಕಾರ್ಯ ನಡೆಯಬೇಕು ಎಂಬುದು ನಿಯಮವಾಗಿದೆ ಆದರೆ ಈ ನಿಯಮದ ಜಾರಿಗೆ ಅನೇಕ ಅಡ್ಡಿಗಳು ನಿರ್ಮಾಣವಾಗುತ್ತಿದೆ ಹೀಗಾಗಿ ಕ್ಷೇತ್ರ ಪುನರ್ ವಿಂಗಡಣೆ ಯಾವಾಗ ನಡೆಯಲಿದೆ ಎಂಬುದು ಯಾರಿಗೂ ಸ್ಪಷ್ಟವಿಲ್ಲ ನಿಯಮಗಳ ಪ್ರಕಾರವೇ ನಡೆದಿದ್ದೇ ಆದರೆ ಮುಂದಿನ ಜನಗಣತಿ 2026ರಲ್ಲಿ ನಡೆಯಲಿದೆ ಮತ್ತು ಆನಂತರವಷ್ಟೇಕ್ಷೇತ್ರ ಮರುವಿಂಗಡಣೆ 2031ರಲ್ಲಿ ನಡೆಯುವ ಸಾಧ್ಯತೆ ಇದೆ.
    ಇಂತಹ ಗುರುತರವಾದ ಅಂಶವನ್ನು ಮುಂದಿಟ್ಟುಕೊಂಡು ಈ ಮಹತ್ವವಾದ ಸಂವಿಧಾನ ತಿದ್ದುಪಡಿ ಮತ್ತು ವಿಧೇಯಕವನ್ನು ಜಾರಿಗೊಳಿಸಲು ಮುಂದಾದರೆ ಮಹಿಳೆಯರು ರಾಜಕೀಯ ಮೀಸಲಾತಿ ಪಡೆಯಲು ಇನ್ನೆರಡು ದಶಕಗಳ ಕಾಲ ಕಾಯಬೇಕಾಗಬಹುದು ಎನ್ನುವುದು ಇಲ್ಲಿರುವ ಪ್ರಮುಖ ಪ್ರಶ್ನೆಯಾಗಿದೆ. ಇಂತಹ ಮಹತ್ವವಾದ ಮಸೂದೆ ಮತ್ತು ಸಂವಿಧಾನ ತಿದ್ದುಪಡಿಯನ್ನು ಮುಂಬರುವ ಲೋಕಸಭಾ ಚುನಾವಣೆಗೆ ಜಾರಿಗೆ ಬರಲಿದೆ ಎಂಬುದನ್ನು ಸ್ಪಷ್ಟ ಪಡಿಸದೆ ಹೀಗಿರುವ ರೀತಿಯಲ್ಲಿ ಜಾರಿಗೊಳಿಸಲು ಮುಂದಾದರೆ ಅದರಿಂದ ಮಹಿಳೆಯರಿಗೆ ಅನ್ಯಾಯ ಮಾಡಿದಂತಾಗುವುದು ಮಾತ್ರವಲ್ಲ ಮೀಸಲಾತಿಯ ಉದ್ದೇಶವೇ ವಿಫಲವಾಗಲಿದೆ.

    m News Politics reservation Trending Women's Reservation Bill womens reservation ಕಾಂಗ್ರೆಸ್ ಕಾನೂನು ಚುನಾವಣೆ ನರೇಂದ್ರ ಮೋದಿ ನ್ಯಾಯ ರಾಜಕೀಯ ಸಂಸತ್
    Share. Facebook Twitter Pinterest LinkedIn Tumblr Email WhatsApp
    Previous Articleಕಾಂಗ್ರೆಸ್ ನ ಎಲ್ಲಾ ಶಾಸಕರನ್ನು ಅನರ್ಹಗೊಳಿಸಬೇಕಂತೆ | Congress
    Next Article Police ವಾಹನಗಳ ವೇಗಕ್ಕೆ ಬ್ರೇಕ್ | Karnataka Police
    vartha chakra
    • Website

    Related Posts

    ಭವಾನಿ ರೇವಣ್ಣ ಪ್ರಯಾಣಿಸುತ್ತಿದ್ದ ಕಾರು ಯಾರದ್ದು? | Bhavani Revanna

    ಡಿಸೆಂಬರ್ 7, 2023

    10‌ ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ | Loan Waiver

    ಡಿಸೆಂಬರ್ 6, 2023

    ಬಿಜೆಪಿಯಲ್ಲಿ ನಾಯಿ, ನರಿಗಳಿಂದ ಸೋಮಣ್ಣ ಅವರಿಗೆ‌ ಸಮಸ್ಯೆ ‌ಅಂತೆ | BJP

    ಡಿಸೆಂಬರ್ 6, 2023

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕ್ರೀಡೆ
    • ಚುನಾವಣೆ
    • ಚುನಾವಣೆ 2023
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಭವಾನಿ ರೇವಣ್ಣ ಪ್ರಯಾಣಿಸುತ್ತಿದ್ದ ಕಾರು ಯಾರದ್ದು? | Bhavani Revanna

    10‌ ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ | Loan Waiver

    ಬಿಜೆಪಿಯಲ್ಲಿ ನಾಯಿ, ನರಿಗಳಿಂದ ಸೋಮಣ್ಣ ಅವರಿಗೆ‌ ಸಮಸ್ಯೆ ‌ಅಂತೆ | BJP

    ಗೂಳಿಹಟ್ಟಿ ತೊದಲುತ್ತಾ ಮಾತನಾಡಿದ್ದಾರಾ? | Gulihatti Shekar

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Renatingk ರಲ್ಲಿ Kailash Kher ಮೇಲೆ ನೀರಿನ ಬಾಟಲಿ ಎಸೆದ ಕಿಡಿಗೇಡಿಗಳು!
    • Veronapxc ರಲ್ಲಿ Kailash Kher ಮೇಲೆ ನೀರಿನ ಬಾಟಲಿ ಎಸೆದ ಕಿಡಿಗೇಡಿಗಳು!
    • Prokat_gkEr ರಲ್ಲಿ ಅಣ್ಣಾಮಲೈ ಹತ್ತಿರ ಸಿಕ್ಕಿದ್ದು 2 ಜೊತೆ ಬಟ್ಟೆ 2 ಲೀಟರ್ ನೀರು | K Annamalai | BJP
    Latest Kannada News

    ಭವಾನಿ ರೇವಣ್ಣ ಪ್ರಯಾಣಿಸುತ್ತಿದ್ದ ಕಾರು ಯಾರದ್ದು? | Bhavani Revanna

    ಡಿಸೆಂಬರ್ 7, 2023

    10‌ ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ | Loan Waiver

    ಡಿಸೆಂಬರ್ 6, 2023

    ಬಿಜೆಪಿಯಲ್ಲಿ ನಾಯಿ, ನರಿಗಳಿಂದ ಸೋಮಣ್ಣ ಅವರಿಗೆ‌ ಸಮಸ್ಯೆ ‌ಅಂತೆ | BJP

    ಡಿಸೆಂಬರ್ 6, 2023
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2023
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    ಬರ ನಿರ್ವಹಣೆಗೆ ಹಣ ಬಿಡುಗಡೆ #government
    Subscribe