ತಿರುವನಂತಪುರ – ದಿ ಕೇರಳ ಸ್ಟೋರಿ.. ಭಾರತೀಯ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ವಿವಾದಕ್ಕೆ ಒಳಗಾದ ಚಿತ್ರ.
ಸುದೀಪ್ರೋ ಸೇನ್ ನಿರ್ದೇಶನದ ಅದಾ ಶರ್ಮಾ-ನಟಿಸಿದ ಕೇರಳ ಸ್ಟೋರಿ ಧಾರ್ಮಿಕ ಮತಾಂತರಗಳು, ಐಸಿಸ್ ಮತ್ತು ಲವ್ ಜಿಹಾದ್‍ನ ನಂತಹ ಕಥಾ ಹಂದರ ಹೊಂದಿದೆ.ಈ ಸಿನಿಮಾ ನೈಜ ಘಟನೆಗಳನ್ನು ಆಧರಿಸಿದ ಚಿತ್ರ ಎಂದು ನಿರ್ಮಾಪಕರು ಹೇಳಿದರೆ, ಇಲ್ಲ ಅವುಗಳೆಲ್ಲ ಕಟ್ಟುಕಥೆ. ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ರಾಜಕೀಯ ಕಾರಣಕ್ಕಾಗಿ ನಿರ್ಮಿಸಿರುವ ಸಿನಿಮಾ. ಈ ಸಿನಿಮಾದಿಂದ ಸಮಾಜದಲ್ಲಿ ಅಪನಂಬಿಕೆ ಮತ್ತು ಅಶಾಂತಿಯ ವಾತಾವರಣ ಮೂಡುತ್ತದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಇಂತಹ ಆರೋಪಗಳ ನಡುವೆ, ಸಿನಿಮಾ ಪ್ರದರ್ಶನಕ್ಕೆ ಪಶ್ಚಿಮ ಬಂಗಾಳದಲ್ಲಿ ನಿಷೇಧಿಸಲಾಯಿತು ಮತ್ತು ತಮಿಳುನಾಡಿನ ಅನೇಕ ಚಿತ್ರಮಂದಿರಗಳು ಅದನ್ನು ಬಿಡುಗಡೆ ಮಾಡಲು ನಿರಾಕರಿಸಲಾಗಿತ್ತು.
ಇಂತಹ ವಾದ ವಿವಾದಗಳ ನಡುವೆಯೂ ಬಿಡುಗಡೆಯಾದ ಸಿನಿಮಾ 2023 ರ ಅತಿದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರವು ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ಈ ಚಲನಚಿತ್ರವನ್ನು ಇದೀಗ ಓ ಟಿ ಟಿ ಯಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಯತ್ನಿಸುತ್ತಿದ್ದಾರೆ ಆದರೆ ಯಾರೊಬ್ಬರೂ ಈ ಸಿನಿಮಾ ಖರೀದಿಗೆ ಮುಂದಾಗುತ್ತಿಲ್ಲ.
ನಮ್ಮ ಚಿತ್ರವನ್ನು ಒಟಿಟಿಯಲ್ಲಿ ಖರೀದಿಸಲು ಯಾರು ಮುಂದೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಚಿತ್ರದ ನಿರ್ದೇಶಕ ಸುದೀಪ್ರೋ ಸೇನ್ ಅವರು ನಮ ವಿರುದ್ಧ ಚಿತ್ರರಂಗದ ಒಂದು ವರ್ಗ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಮತಾಂತರದಂತಹ ಸೂಕ್ಷ್ಮ ಕಥಾಹಂದರ ಹೊಂದಿರುವ ನಮ್ಮ ಚಿತ್ರಕ್ಕೆ ಓಟಿಟಿ ಖರೀದಿದಾರರಿಗಾಗಿ ಹುಡುಕಾಟ ನಡೆಸುತ್ತಿದ್ದೇನೆ ಆದರೆ, ಇದುವರೆಗೂ ಯಾರು ಚಿತ್ರ ಖರೀದಿಗೆ ಆಸಕ್ತಿ ತೋರಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Previous ArticleTorontoದಲ್ಲಿ ಮೇಯರ್ ಸ್ಥಾನಕ್ಕೆ ಸ್ಪರ್ದಿಸುತ್ತಿರುವ ನಾಯಿ
Next Article 488 ರೂಪಾಯಿಗೆ ಡಬಲ್ ಮರ್ಡರ್